* ಥರ್ಮಾಮೀಟರ್‌ಗಳದೇ ತಪ್ಪು ಅಳತೆ!
* ಡಿಜಿಟಲ್ ಥರ್ಮಿ ದುಬಾರಿ
* ಹಿಕ್ಸ್‌ನ ಅಕ್ಯುಟೆಮ್, ಓವಲ್ ಇದ್ದುದರಲ್ಲಿ ಕ್ಷೇಮ
ಯಾಕೋ ಜ್ವರದ ಅನುಭವ, ಚಳಿ ಚಳಿ. ಜ್ವರದ ಥರ್ಮಾಮೀಟರ್ ಬಳಸಿ, ಜ್ವರ ಎಷ್ಟಿದೆ ನೋಡಿದರೆ... ಅಬ್ಬಬ್ಬಾ, ೧೦೩೦! ಊಹ್ಞೂ, ಆಗಲೂ ೧೦೩ ಡಿಗ್ರಿಗಳಷ್ಟು ಭಯ ಬೀಳುವುದು ಬೇಡ. ಏತಕ್ಕಪ್ಪಾಂದ್ರೆ, ಈ ಥರ್ಮಮೀಟರ್ ತೋರಿಸುವ ಮಾಪನವೇ ಸರಿಯಿಲ್ಲ, ಹಿಂದೂಸ್ಥಾನ ಗೋಲ್ಡ್ ಥರ್ಮಾಮೀಟರ್ ತೋರಿಸಿದ ಈ ಲೆಕ್ಕಕ್ಕಿಂತ ವಾಸ್ತವ ಜ್ವರ ೧.೦೬೦ ಕಡಿಮೆಯಿದೆ!
ಇದು ಹಿಂದೂಸ್ಥಾನ್ ಗೋಲ್ಡ್ ಒಂದರ ಕತೆಯಲ್ಲ. ನಮ್ಮ ದೇಶದಲ್ಲಿ ಮಾರಾಟವಾಗುವ ಯಾವ ಬ್ರಾಂಡ್‌ನ ಥರ್ಮಾಮೀಟರ್ರೂ ಸರಿಯಾದ ಮಾಪನ ತೋರಿಸುತ್ತಿಲ್ಲ. ಅಹ್ಮದಾಬಾದ್‌ನ ಕನ್ಸೂಮರ್ ಎಜುಕೇಷನ್ ಮತ್ತು ರೀಸರ್ಚ್ ಸೊಸೈಟಿ ದೇಶದ ಮಾರುಕಟ್ಟೆಯಲ್ಲಿರುವ ೧೮ ಬ್ರಾಂಡ್‌ಗಳನ್ನು ತನ್ನ ಅಧಿಕೃತ ಪ್ರಯೋಗಾಲಯದಲ್ಲಿ ಪರೀಕ್ಷಿಸಿದ್ದು, ಎಲ್ಲವೂ ರೋಗಗ್ರಸ್ಥವಾಗಿವೆ.
ಪಾದರಸ ಮಾಪಕದ ಸಾಲಿಡ್ ಸ್ಟೆಮ್, ಮುಚ್ಚಿದ ಸ್ಕೇಲ್ ಮಾದರಿಯ ಥರ್ಮಮೀಟರ್‌ಗಿಂತ ಡಿಜಿಟಲ್ ಥರ್ಮಿಗಳೇ ವಾಸಿ. ಅವುಗಳಲ್ಲಿ ಬೆಕ್ಟಾನ್ ಡಿಕಿನ್ಸನ್ ಬ್ರಾಂಡ್ ಥರ್ಮಿಯಲ್ಲಿ ೦.೧೧೦ ಗಳಷ್ಟು ವ್ಯತ್ಯಾಸ ಮಾತ್ರವಿದೆ. ಬಿಐಎಸ್ ಉಳಿದ ಥರ್ಮಿಗಳಲ್ಲಿ -+ ೦.೩೬೦ ಈನಷ್ಟು ವ್ಯತ್ಯಾಸಕ್ಕೆ ಮಾನ್ಯತೆಯಿತ್ತಿದೆ. ಆದರೆ ಈವರೆಗೂ ಬಿಐಎಸ್ ಡಿಜಿಟಲ್ ಥರ್ಮಿಗೆ ಮಾನದಂಡವನ್ನೇ ನಿಗದಿ ಪಡಿಸಿಲ್ಲ. ಅಲ್ಲದೇ ಡಿಜಿಟಲ್ ಥರ್ಮಿಗಳ ದರ ಇತರ ಮಾದರಿಗೆ ಹೋಲಿಸಿದರೆ ತೀವ್ರ ದುಬಾರಿ. ಕನಿಷ್ಟ ೧೮ ರಿಂದ ೯೦ ರೂ ಮಧ್ಯೆ ಇವು ಲಭ್ಯವಾದರೆ ಡಿಜಿಟಲ್ ಥರ್ಮಿ ಬೆಲೆ ೩೯೦ ರೂ. ಜ್ವರ ಏರಲು ಈ ವಿಷಯ ಕೇಳಿದರೂ ಸಾಕು!
೨೦೦೦ದ ಜುಲೈನಲ್ಲಿ ಸಿಇಆರ್‌ಎಸ್ ೨೧ ಥರ್ಮಿ ಬ್ರಾಂಡ್‌ಗಳನ್ನು ಪರೀಕ್ಷಿಸಿತು. ಆಗ ೨೦ ಬ್ರಾಂಡ್‌ಗಳು ನಿಖರ ಉಷ್ಣಾಂಶ ತೋರಿಸಲು ವಿಫಲವಾಗಿದ್ದವು. ಅಂದು ೯೮.೬ ೦ಈನ ಉಷ್ಣತೆಯ ಪರೀಕ್ಷೆ ಮಾತ್ರ ಮಾಡಲಾಗಿತ್ತು. ಅಲ್ಲಿಂದ ೭ ವರ್ಷಗಳು ಸಂದವು. ಗುಣಮಟ್ಟ ಹೆಚ್ಚಬೇಕಿತ್ತು. ಈಗ ಸಿಇಆರ್‌ಎಸ್ ೧೦೨.೨೦ ಹಾಗೂ ೧೦೫.೮೦ ಈನ ಉಷ್ಣತೆಯಲ್ಲೂ ಥರ್ಮಿಗಳನ್ನು ಪರಿಶೀಲಿಸಿತು. ಈ ಬಾರಿ ಅಷ್ಟಕ್ಕೆ ಅಷ್ಟೂ ಬ್ರಾಂಡ್‌ಗಳಷ್ಟೂ ಬ್ರಾಂಡ್‌ಗಳದ್ದು ಸೋಲು!
ಸಾಧ್ಯಕ್ಕಂತೂ ಎಲ್ಲವೂ ಸರಿ ಆಗಲಾರದು. ನಾವು ಥರ್ಮಿಗಳನ್ನು ಉಪಯೋಗಿಸಲೇಬೇಕು. ರೋಗದ ಮೂಲಭೂತ ಲಕ್ಷಣಗಳನ್ನು ಅರಿಯಲು ವೈದ್ಯರೂ ಥರ್ಮಿಗೆ ಮೊರೆ ಹೋಗಲೇ ಬೇಕು. ಹಾಗಾದರೆ ಯಾವ ಬ್ರಾಂಡ್‌ನ್ನು ಬಳಸಬೇಕು? ಮಿಲಿಯನ್ ಡಾಲರ್ ಪ್ರಶ್ನೆಯಿದು.
ವಿಚಿತ್ರವೆಂದರೆ, ಕೆಲವು ಬ್ರಾಂಡ್‌ಗಳು ಎರಡು ಘಟ್ಟದ ಉಷ್ಣತೆಯಲ್ಲಿ ಬಿಐಎಸ್ ಮಾನದಂಡಗಳಿಗೆ ಅನುರೂಪವಾಗಿವೆ. ಹಿಕ್ಸ್ ಅಕುಟೆಮ್ ಭಾರತೀಯ ತಯಾರಿಕೆ. ಇದು ೯೮.೬ ಹಾಗೂ ೧೦೫.೮೦ ಈ ಉಷ್ಣತೆಯಲ್ಲಿ ನಿಖರ ಉಷ್ಣತೆಯನ್ನೇ ದಾಖಲಿಸುತ್ತದೆ. ೧೦೨.೨೦ ಈನಲ್ಲಿ ಮಾತ್ರ ೦.೫೯೦ ಗಳಷ್ಟು ವ್ಯತ್ಯಾಸ. ಆ ಲೆಕ್ಕದಲ್ಲಿ ಈ ಸಾಲಿಡ್ ಸ್ಟೆಮ್ ಬ್ರಾಂಡ್ ಬಳಕೆಗೆ ಇದ್ದುದರಲ್ಲಿ ಆಯ್ಕೆಯಾಗುತ್ತದೆ. ಇದರ ಬೆಲೆಯೂ ಉಳಿದೆಲ್ಲವುಗಳಿಗಿಂತ ಕಡಿಮೆ, ೧೮ ರೂ. ಥರ್ಮಿಗಳ ಸ್ಕೇಲ್ (ಎನ್ ಕ್ಲೋಸ್‌ಡ್) ವರ್ಗದಲ್ಲಿಯೂ ಓವಲ್ ಖರೀದಿಗೆ ಸೂಕ್ತ, ೨೦ರೂ ಬೆಲೆ. ೧೦೨.೨೦ ಮತ್ತು ೧೦೫.೮೦ ಈನಲ್ಲಿ ಖಚಿತ ಮಾಹಿತಿ ಸಿಗುತ್ತದೆ. ೯೮.೬ ಈನಲ್ಲಿ ಮಾತ್ರ ೦.೨೯೦ ವ್ಯತ್ಯಾಸ. ದುಬಾರಿ ಬೆಲೆ ಸಮಸ್ಯೆಯಲ್ಲ ಎನ್ನುವವರು ಡಿಜಿಟಲ್ ಥರ್ಮಿ ಖರೀದಿಸಬಹುದು. ಅವುಗಳಲ್ಲೂ ಕೆಡಿ ೨೦೪ ಎ ಎಂಬ ಬ್ರಾಂಡ್ ನಂಬಲರ್ಹವಲ್ಲ.
ಅಷ್ಟಕ್ಕೂ ಪರೀಕ್ಷಿಸಲ್ಪಟ್ಟ ಬ್ರಾಂಡ್‌ಗಳ ವಿವರ ಬಳಕೆದಾರರಲ್ಲಿ ಇದ್ದರೆ ಚೆನ್ನ, ಸಿಇಆರ್‌ಎಸ್ ಸಾಲಿಡ್ ಸ್ಟೆಮ್ ವರ್ಗದ ಜೆವಿಎಂ ಡಾಕ್ಟರ‍್ಸ್ ಚಾಯ್ಸ್, ಎನ್‌ಬಿ ಸೇಫ್ಟಿ, ಎ-ಒನ್, ಹಿಂದೂಸ್ಥಾನ್ ಡಾಕ್ಟರ್, ಹಿಂದೂಸ್ಥಾನ್ ಗೋಲ್ಡ್ ಮಾದರಿಗಳನ್ನು, ಮುಚ್ಚಿದ ಸ್ಕೇಲ್ ಮಾದರಿಯಲ್ಲಿ ಸೇಫ್ಟಿ ಘಿಘಿಐ, ವೌಡೋ ಎಂಸಿಪಿ, ಕೋಮೆಟ್ ಗೋಲ್ಡ್, ಡಾಕ್ಟರ್, ಗೋಲ್ಡ್ ರಿಯಲ್, ಎಸ್‌ಎಂಐಸಿ ಗೋಲ್ಡ್, ಹಿಕ್ಸ್ ಎಕ್ಸ್‌ಎಲ್, ಎನ್‌ಬಿ ಎಸ್‌ಎಂಐಸಿ ಗೋಲ್ಡ್, ಹಿಕ್ಸ್ ಎಕ್ಸ್‌ಎಲ್, ಎನ್‌ಬಿ ಎಸ್ ಎಂಐಸಿಗೋಲ್ಡ್ ಮತ್ತು ಡಾ. ಮೋರ್‌ಪೆನ್ ಪರೀಕ್ಷೆಗೊಳಪಡಿಸಿತ್ತು
.
ಈಗಲೂ ಜ್ವರ ಇದೆಯೇ?
-ಮಾವೆಂಸ
1 comments:
ನಿಜಕ್ಕೂ ಜಗತ್ತೇ ಬೆಚ್ಚಿ ಬೀಳುತ್ತಿರುವ ಇಂಥ ಸಂಧರ್ಭದಲ್ಲಿ ಇಂತ ಲೇಖನಗಳ ಅವಶ್ಯಕತೆ ಇದೆ ಎನಿಸುತ್ತೆ ನನಗೆ. ಹಂದಿ ಜ್ವರದಲ್ಲೂ ಈ ರೀತಿಯ ವದ್ಯಕೀಯ ಉಪಕರಣಗಳ ಸಮಸ್ಯೆ, ಅವುಗಳನ್ನು ಬಳಸುವ ವಿಧಾನದಲ್ಲೂ ತೊಂದರೆ ಇದೆ. ಆದ್ದರಿಂದಲೇ ರೋಗ ಇಂದು ಇಷ್ಟು ವ್ಯಾಪಕವಾಗುತ್ತಿದೆ. ಅಂತ ಸೂಕ್ಷ್ಮತೆಗಳನ್ನು ನಾವೆಲ್ಲಾ ಅರಿಯಬೇಕಿದೆ.
200812023996 ಕಾಮೆಂಟ್ ಪೋಸ್ಟ್ ಮಾಡಿ