
ಗೆಳೆಯ ಶ್ರೀಪಾದ್ರಾವ್ ನಂದೀತಳೆ ವೃತ್ತಿಯಲ್ಲಿ ಪಶುವೈದ್ಯರು. ಸಹಜವಾಗಿ ಅವರಲ್ಲಿ ಪ್ರಾಣಿಗಳ ಕುರಿತು ಹಲವು ಹತ್ತು ಮಾಹಿತಿಗಳ ಸಂಗ್ರಹವಿದೆ. ಮುಖ್ಯವಾಗಿ ನಾಯಿಗಳ ಕುರಿತ ಅವರ ಪ್ರೀತಿ, ಅಧ್ಯಯನ, ಚಿಕಿತ್ಸೆ ಪರಿಣತಿ ಹೆಸರು ವಾಸಿ. ಅವರು ಸಂಗ್ರಹಿಸಿದ ಒಂದು ಸ್ವಾರಸ್ಯಕರ ಮಾಹಿತಿ ಗುಚ್ಛ ನಿಮ್ಮೆದುರಿಗಿದೆ. ಸಕಾರಾತ್ಮಕ ಪ್ರತಿಕ್ರಿಯೆ ನಿಮ್ಮಿಂದ ಬಂದದ್ದೇ ಆದರೆ ಇನ್ನಷ್ಟು ಬರೆದಾರು!
ನಿಮಗಿದು ಗೊತ್ತೇ?
 ಎಲ್ಲಾ ನಾಯಿಗಳಿಗೂ muuಲ ಕಾಡು ತೋಳ. ಇದನ್ನು ಪಳಗಿಸಿ ಸಾಕು ನಾಯಿ ಸಂತತಿ ಬೆಳೆಸಲಾಗಿದೆ.
 ನಾಯಿಗಳಲ್ಲಿ ೪೦೦ಕ್ಕೂ ಹೆಚ್ಚು ವಿವಿಧ ಜಾತಿಗಳಿವೆ.
 ನಾಯಿಯ ಮಾಂಸವು ಹಲವು ದೇಶಗಳಲ್ಲಿ ಜನಪ್ರಿಯ ಆಹಾರ.
 ಮಧುಮೇಹ ರೋಗಕ್ಕೆ ಚಿಕಿತ್ಸೆಯನ್ನು ಮೊದಲು ನಾಯಿಯ ಮೇಲೆ ಪ್ರಯೋಗಿಸಲಾಯಿತು.
 ಧುವ ಪ್ರದೇಶದ ಎಸ್ಕಿಮೋ ಜನರ ಸಾರಿಗೆ ಸಾಧನ - ನಾಯಿ ಬಂಡಿ, ಸಂಪರ್ಕ ನಾಯಿಗಳ ಮೂಲಕ;
 ಡೆನ್ಮಾರ್ಕ ದೇಶದಲ್ಲಿ ಹಾಲು ಸಾಗಣಿಕೆಗೆ ಈಗಲೂ ನಾಯಿ ಬಂಡಿಗಳನ್ನೇ ಬಳಸಲಾಗುತ್ತದೆ.
 ಭಕ್ತ ಕನಕದಾಸರು ನಾಯಿಯಲ್ಲಿ ಭಗವಂತನನ್ನು ಕಂಡರು.
 ನಾಯಿಗಳ ಮ್ಯೂಸಿಯಂ ಅಮೇರಿಕಾದಲ್ಲಿದೆ.
 ನೇಪಾಳದಲ್ಲಿ ನಾಯಿಗೆ ಹೂವಿನ ಹಾರ ಹಾಕಿ ಪೂಜಿಸುತ್ತಾರೆ.
 ವಿಧೇಯತೆ ಮತ್ತು ನಂಬಿಕೆಯಲ್ಲಿ ಹೆಣ್ಣುನಾಯಿಯೇ ಮೇಲು.
 ಧರ್ಮರಾಯ ಸ್ವರ್ಗಕ್ಕೆ ಹೋಗುವಾಗ ಕಡೆಯವರೆಗೂ ಆತನನ್ನು ಹಿಂಬಾಲಿಸಿದ್ದು ಒಂದು ಕಪ್ಪು ನಾಯಿ.
 ರಷ್ಯಾದ ಹೆಣ್ಣುನಾಯಿ ‘ಲೈಕಾ’ ೦೩.೦೧.೧೯೫೭ರಲ್ಲಿ ಸ್ಪುಟ್ನಿಕ್-೨ ರಲ್ಲಿ ಪ್ರಥಮವಾಗಿ ಬಾಹ್ಯಾಕಾಶಕ್ಕೆ ತೆರಳಿತು. ವಯಸ್ಕ ನಾಯಿಗಳಲ್ಲಿ ೪೨ ಹಲ್ಲುಗಳಿರುತ್ತವೆ.
 ನಾಯಿಗಳು ಬಣ್ಣಗಳಲ್ಲಿನ ವ್ಯತ್ಯಾಸವನ್ನು ಗುರುತಿಸಲಾರವು.
 ಎರಡನೇ ಮಹಾಯುದ್ಧದಲ್ಲಿ ಮಿತ್ರಸೇನೆ ಸುಮಾರು ೨ ಲಕ್ಷ ನಾಯಿಗಳನ್ನು ಬಳಸಿತ್ತು.
 ಗ್ರೇಹೌಂಡ್ ನಾಯಿ ಗಂಟೆಗೆ ೭೦ ಕಿ.ಮೀ. ವೇಗದಲ್ಲಿ ಓಡಬಲ್ಲದು. ಹಾಗೆಯೇ ಕರ್ನಾಟಕದ ಮುಧೋಳ್ ಹೌಂಡ್ ಕೂಡ. ನಾಯಿಯ ವಾಸನಾ ಶಕ್ತಿ ಮನುಷ್ಯನ ೪೦ ಪಟ್ಟು.ಕೇಳುವ ಶಕ್ತಿ ಮನುಷ್ಯನ ೪ ಪಟ್ಟು.
 ’ಬಾಸೆಂಜಿ’ ಜಾತಿಯ ನಾಯಿಗಳು ಬೊಗಳುವುದೇ ಇಲ್ಲ.
o ಜಗತ್ತಿನ ಅತಿ ಚಿಕ್ಕ ನಾಯಿ ‘ಯಾರ್ಕ್ಶೈರ್ ಟೆರ್ರಿಯರ್’ ಕೇವಲ ೨.೫ ಇಂಚು ಎತ್ತರ, ತೂಕ ೧೩ ಗ್ರಾಂ ಇತ್ತು.
o ಬ್ಯಾಂಗ್-ಗ್ರೇಹೌಂಡ್ ನಾಯಿ ೩೦ ಅಡಿ ಜಿಗಿದು  ವಿಶ್ವದಾಖಲೆ ಮಾಡಿದೆ.
o ಅಮೇರಿಕಾದ ಅಧ್ಯಕ್ಷ ಜಾರ್ಜ್ ಬುಷ್ ನಾಯಿಯ ಹೆಸರು ‘ಇಂಡಿಯಾ’
ನಾಯಿಯ ಉಪಯೋಗ; 
ಬೇಟೆ, ನಿಯತ್ತು, ಕಾವಲು, ಕುರಿ ಕಾಯಲು, ಕುರುಡsರಿಗೆ ಕಣ್ಣಾಗಿ, ರಹಸ್ಯ ತಾಣ ಪತ್ತೆ, ಮುದ್ದಿಗಾಗಿ, ಸ್ಫೋಟಕ ಪತ್ತೆಗಾಗಿ, ಸಿನಿಮಾ, ಸರ್ಕಸ್, ಅಪರಾಧ ಪತ್ತೆ, ಮುದುಕರಿಗೆ ಜೀವನ ಸಂಗಾತಿಯಾಗಿ.
$ಚಂಡಮಾರುತ,ಭೂಕಂಪ,ಸುನಾಮಿ ಮುಂತಾದ ಪ್ರಕೃತಿ ವಿಕೋಪ ನಾಯಿಗಳಿಗೆ ಮೊದಲೇ ತಿಳಿದಿರುತ್ತದೆ.
ಹಿಮಪ್ರದೇಶದಲ್ಲಿ ಹಿಮಪಾತವಾಗುವ ಮೊದಲೇ ವಿಕಾರವಾಗಿ ಕೂಗುತ್ತವೆ.
$‘ಟಮ್ಮಿ’ ಎಂಬ ಗಂಡು ಗ್ರೇ ಹೌಂಡ್ ನಾಯಿ ೩೦೦ಕ್ಕೂ ಹೆಚ್ಚು ಮರಿಗಳಿಗೆ ತಂದೆಯಾಗಿದೆ.
ಅಮೇರಿಕಾದ ಫಾಕ್ಸ ಹೌಂಡ್ ಲೀನಾ ಒಂದೇ ಬಾರಿಗೆ ೨೩ ಮರಿಗಳಿಗೆ ಜನ್ಮ ನೀಡಿ ದಾಖಲೆ ನಿರ್ಮಿಸಿದೆ.
ಬಿಲ್ಲಿ ಎಂಬ ಬುಲ್ ಟೆರ್ರಿಯರ್ ನಾಯಿ ೫.೫ ನಿಮಿಷಗಳಲ್ಲಿ ೧೦೦ ಇಲಿಗಳನ್ನು ಹಿಡಿದು ದಾಖಲೆ ನಿರ್ಮಿಸಿದೆ.
    ಜರ್ಮನ್ ಶೆಫರ್ಡ/ಆಲ್ಸೇಷಿಯನ್ ನಾಯಿ;
 ಮೂಲ: ಜರ್ಮನಿ,
 ಉದ್ದೇಶ : ಉತ್ತಮ ಕಾವಲುಗಾರ, ಸಂಗಾತಿ,
 ಗುಣಗಳು: ನಂಬಿಕಸ್ಥ, ಚುರುಕು,ರಾಜ ಗಾಂಭೀರ್ಯ, ಆಕರ್ಷಕ ಮೈಕಟ್ಟು,                
  ಬಣ್ಣ  :   ಕಪ್ಪು,ಬೂದು,ಕಿತ್ತಲೆ,ಕಂದು.
 ಎತ್ತರ  :   ೧೯-೨೫
 ತೂಕ  : ೨೮-೪೦ ಕೆ.ಜಿ.
 ಕಾಳಜಿ : ಕೂದಲು, ಕಿವಿಗಳ ಬಗೆ ನಿಗಾ.
 ಆಯಸ್ಸು :  ೧೨-೧೩ ವರ್ಷಗಳು.
 ವಿಶೇಷತೆ: ಮಿಲಿಟರಿ, ಪೋಲೀಸ್ ಹಾಗೂ ಅಪರಾಧ ಪತ್ತೆ(ಸಿ.ಓ.ಡಿ) ಇಲಾಖೆಗಳಲ್ಲಿ ಬಳಕೆ. ಕುರುಡರ ಸಂಗಾತಿ
      ಗೋಲ್ಡನ್ ರಿಟ್ರೀವರ್:
 ಮೂಲ:        ಗ್ರೇಟ್ ಬ್ರಿಟನ್
 ಉದ್ದೇಶ : ಬೇಟೆ, ಸಂಗಾತಿ ಶೋಧಕ
 ಗುಣಗಳು : ಮೋಹಕ, ಬುದ್ಧಿಶಾಲಿ, ಸ್ನೇಹಜೀವಿ,
 ಬಣ್ಣ    : ಚಿನ್ನದ ಬಣ್ಣ,ಹಾಲಿನ ಕೆನೆ
 ಎತ್ತರ   :  ೨೦-೨೪
 ತೂಕ   :  ೨೭-೩೬ ಕೆ.ಜಿ.
 ಆಯಸ್ಸು :  ೧೩-೧೫ ವರ್ಷಗಳು
 ಕಾಳಜಿ   : ಕೂದಲಿನ ಆರೋಗ್ಯ
    ಪೊಮೊರೇನಿಯನ್:
 ಮೂಲ :  ಜರ್ಮನಿ
 ಉದ್ದೇಶ :  ಮುದ್ದಿಗಾಗಿ, ಮಕ್ಕಳ ಸಂಗಾತಿ
 ಗುಣಗಳು: ಮುಂಗೋಪಿ, ಚುರುಕು ಬುದ್ಧಿವಂತ, ಹೆಚ್ಚು ಬೊಗಳುತ್ತವೆ.
 ಬಣ್ಣ   :  ಕಪ್ಪು, ಕಂದು ಬಿಳಿ ಮಿಶ್ರಣ
 ಎತ್ತರ  :  ೯-೧೧
 ತೂಕ  :  ೧.೫-೩.೫ ಕೆಜಿ
 ಆಯಸ್ಸು : ೧೫ ವರ್ಷಗಳು
 ವಿಶೇಷತೆ : ಸರ್ಕಸ್ಗಳಲ್ಲಿ ವಿಶ್ವದಾದ್ಯಂತ ಬಳಕೆ.
 ಕಾಳಜಿ   : ಕೂದಲು, ಹಲ್ಲು ಹಾಗೂ ಕಣ್ಣುಗಳ ನಿರ್ವಹಣೆ
       ಡಾಲ್ಮೇಷಿಯನ್:
 ಮೂಲ :  ಭಾರತ, ಯುಗೊಸ್ಲಾವಿಯಾ
 ಉದ್ದೇಶ :  ಕಾವಲುಗಾರ, ಸಂಗಾತಿ
 ಗುಣಗಳು: ನವಿರಾದ ಮೈಕಟ್ಟು, ಸಂಯಮಿ, ಬುದ್ಧಿವಂತ
 ಬಣ್ಣ    :   ಬಿಳಿ, ಕಂದು/ ಕಪ್ಪು ಚುಕ್ಕೆಗಳು
 ಎತ್ತರ   :   ೨೧-೨೪
 ತೂಕ  ;    ೨೨-೨೫ ಕೆಜಿ
 ಆಯಸ್ಸು :   ೧೨-೧೪ ವರ್ಷಗಳು
 ವಿಶೇಷತೆ :  ಸರ್ಕಸ್ಗಳಲ್ಲಿ ವಿಶ್ವದಾದ್ಯಂತ ಬಳಕೆ.
 ಕಾಳಜಿ  :   Zರ್ಮ, ಕಿವಿಗಳ ನಿರ್ವಹಣೆ
       ಡ್ಯಾಕ್ಷ್ಹೌಂಡ್:
 ಮೂಲ   :  ಈಜಿಪ್ಟ್
 ಉದ್ದೇಶ   : ಮನೆ ಕಾವಲುಗಾರ, ಮಕ್ಕಳ ಸಂಗಾತಿ, ಬೇಟೆನಾಯಿ.
 ಗುಣಗಳು :  ಅತಿ ಹೆಚ್ಚು ರೋಗ ನಿರೋಧಕ ಶಕ್ತಿ,ಇಲಿ,ಹೆಗ್ಗಣ, ಹಂದಿಗಳ ಬೇಟೆಗೆ ಹೆಸರುವಾಸಿ.
 ಬಣ್ಣ     :   ಕಪ್ಪು, ಕಂದು, ಕೆಂಪು ಮಿಶ್ರಣ
 ಎತ್ತರ    :   ೮-೧೧”
 ತೂಕ   :    ೫-೧೧ ಕೆಜಿ
 ಆಯಸ್ಸು  :   ೧೫ ವರ್ಷಗಳು
 ವಿಶೇಷತೆ  :  ಮುದುಕರ ಸಂಗಾತಿ.
 ಕಾಳಜಿ   :   ಚುರ್ಮ, ಕಿವಿಗಳ ನಿರ್ವಹಣೆ
     ಲ್ಯಾಬ್ರಾಡಾರ್ ರಿಟ್ರೇವರ್:
 ಮೂಲ   :  ಗ್ರೇಟ್ ಬ್ರಿಟನ್
 ಉದ್ದೇಶ   :  ಶೋಧಕ, ಸಂಗಾತಿ ಬೇಟೆನಾಯಿ.
 ಗುಣಗಳು :  ಬುದ್ಧಿವಂತ, ಸಹನಾಶೀಲ, ಅತ್ಯುತ್ತಮ ಘ್ರಾಣಶಕ್ತಿ,
 ಬಣ್ಣ     :   ಕಪ್ಪು, ಹಳದಿ ಮಿಶ್ರ ಕಂದು
 ಎತ್ತರ    :   ೨೧-೨೨”
 ತೂಕ    :   ೨೭-೩೪ ಕೆಜಿ
 ಆಯಸ್ಸು  :   ೧೨-೧೪ ವರ್ಷಗಳು
 ವಿಶೇಷತೆ  :  ಕುರುಡರ ಸಂಗಾತಿ.ಅಪರಾಧ, ಸ್ಫೋಟಕ ಪತ್ತೆಗೆ ಹೆಸರುವಾಸಿ
 ಕಾಳಜಿ   :   ತರಬೇತಿ,ವ್ಯಾಯಾಮ
     ಮುದ್ಹೋಳ ಹೌಂಡ್
 ಮೂಲ   : ಬಿಜಾಪುರದ ಮುದ್ಹೋಳ
 ಉದ್ದೇಶ   :  ಕಾವಲುಗಾರ, ಅತ್ಯುತ್ತಮ ಬೇಟೆನಾಯಿ.
 ಗುಣಗಳು :  ಬುದ್ಧಿವಂತ, ಸಹನಾಶೀಲ, ಅತ್ಯುತ್ತಮ ಘ್ರಾಣಶಕ್ತಿ,
 ಬಣ್ಣ     :   ಬಿಳಿ, ಹಳದಿ, ಕಂದು ಕಪ್ಪು ಮಿಶ್ರ.
 ಎತ್ತರ    :   ೨೩-೨೮”
 ತೂಕ    :    ೨೨-೨೮ ಕೆಜಿ
 ಆಯಸ್ಸು  :   ೧೪-೧೫ ವರ್ಷಗಳು
 ವಿಶೇಷತೆ  :  ಹೆಸರುವಾಸಿ ಬೇಟೆನಾಯಿ
 ಕಾಳಜಿ    :   ತರಬೇತಿ, ಶಾರೀರಿಕ ವ್ಯಾಯಾಮ
   - ಶ್ರೀಪಾದ್ರಾವ್ ನಂದೀತಳೆ,
| sripad.vet@gmail.com | 
 
 
 
 
 
 
 
 
3 comments:
ಸಂಗ್ರಹ ಯೋಗ್ಯ ಮಾಹಿತಿ.. ನಮ್ಮ ಮನೆಯಲ್ಲಿಯೂ ಕೂಡ ಅಂದಾಜು ಮೂವತ್ತು ವರುಷದಿಂದ ನಾಯಿಯನ್ನು ಪ್ರೀತಿಯಿಂದ ಸಾಕುತ್ತಾ ಬಂದಿದ್ದೇವೆ.. ಶ್ರೀಪಾದ ಡಾಕ್ಟರರ ಹತ್ತಿರ ನಾಯಿಯ ಆರೋಗ್ಯ ಹದಗೆಟ್ಟಾಗ ಪೋನಾಯಿಸಿ ಹೀಗಾಗಿದೆ ಎಂದರೆ ತಕ್ಷಣವೇ ಔಷದಿಯನ್ನು ಹೇಳುವ ಅಥವಾ ಚಿಕಿತ್ಸೆಗೆ ಬರಬೇಕಂದರೆ ಸದಾ ಸಿದ್ದರಾಗಿ ಸಾದ್ಯವಾದಷ್ಟು ಬೇಗನೆ ಬಂದು ಔಷದೋಪಚಾರಮಾಡುವಲ್ಲಿನ ಪ್ರಾಣಿ ಪ್ರೀತಿಯನ್ನು ಮೆಚ್ಚಲೇ ಬೇಕು... ಇನ್ನಷ್ಟು ಒಳ್ಳೆಯ ಮಾಹಿತಿಗಳು ನಮ್ಮ ಶ್ರೀಪಾದರಾವ್ ಅವರಿಂದ ನಿರೀಕ್ಷಿಸುತ್ತೇನೆ..
@ಮಾವೆಂಸ
ಗುರುವೇ, ಶ್ರೀಪಾದ ಡಾಕ್ಟರ್ ಮಿಂಚಂಚೆ(ಈಮೇಲ್)ಗೆ ಎಷ್ಟು ಸ್ಪ್ಯಾಮ್ ಮೇಲ್ ಬಂತೇನ? ನಾನು ಅವರ ಮೊಬೈಲ್ ನಂಬರ್ ಹಂಚಲಾ ಇಲ್ಲಿ??! ಅಲ್ದಲೇ ಎಂತದು ಇದು ಬರೇ ತಪ್ಪು.... ಪಬ್ಲಿಶ್ ಮಾಡಕಿದ್ರೆ ಸರಿ ಮಾಡ್ಕ್ಯಳದಲ್ದಾ(ನನ್ನ ಬ್ಲಾಗಿನಲ್ಲು ಇದಕ್ಕಿಂತಲೂ ಪ್ರಮಾದಕರವಾದ ಸಾಲುಗಳಿದ್ದಾವು..!)
ಕಣ್ತಪ್ಪಿನಿಂದಲೋ ಅಥವಾ ಆಂಗ್ಲ ಭಾಷೆಯಿಂದ ಕನ್ನಡ ಭಾಷೆಗೆ ಬದಲಾವಣೆಯಾಗುವಾಗ ಆದ ದೋಷವೋ ಗೊತ್ತಿಲ್ಲ, ಆದರೂ ಗೊತ್ತಾಗಿ ಗೊತ್ತಾಗಿ ಹೇಳದಿದ್ದರೆ ಸರಿಯಲ್ಲ ಎನ್ನುವ(ಮುಯ್ಯಿಗೆ ಮುಯ್ಯಿ ತೀರಿಸಿಕೊಳ್ಳುವ!) ಒಂದೇ ಕಾರಣದಿಂದ ತಿಳಿಸುತ್ತಿದ್ದೇನೆ ಅನ್ಯತಾ ಭಾವಿಸದೆ ಸರಿಪಡಿಸಿ... !
muuಲ ಕಾಡು ತೋಳ
Zರ್ಮ
ಡ್ಯಾಕ್ಷ್ಹೌಂಡ್ ಆಗಿದೆ ಅದು ಡ್ಯಾಶ್ ಹೌಂಡ್,
ಇನ್ನು ಸುಮಾರು ತಪ್ಪಿದ್ದಿಕ್ಕು ಹುಡ್ಕು!
ನಿಜ, ತಪ್ಪಿದ್ದು. ನನಗೂ ಅದು ಮುಜುಗರದ ವಿಚಾರ. ವಾಸ್ತವವಾಗಿ ಇದು ಮೂಲದಲ್ಲಿ ಇಲ್ಲದ ತಪ್ಪುಗಳು. ಮೊದಲು ಆ ಯೂನಿಕೋಡ್ನ್ನು ಸರಿಯಾಗಿ ಮಾಡದವನಿಗೆ ಹೇಳಬೇಕು. ನನ್ನ ಬ್ಲಾಗ್ ಓದುತ್ತೀರಿ ಮತ್ತು ಪ್ರತಿಕ್ರಿಯಿಸುತ್ತೀರಿ ಎಂಬುದೇ ನನ್ನ ಪುಣ್ಯ. ಬೈಸಿಕೊಳ್ಳುವುದು ದೇವರ ‘ಪ್ರಸಾದ’! ನಡೆಯುತ್ತಿರಲಿ!!
ಸಂಗ್ರಹಯೋಗ್ಯ ಮಾಹಿತಿ, ಡಾಕ್ಟರಿಗೂ ನಿಮಗೂ ಅನಂತ ಧನ್ಯವಾದಗಳು. ನಾಯಿಯನ್ನು ಹೆಚ್ಚು ಪ್ರೀತಿಸುವವರು ಸಹಜವಾಗಿಯೇ ನಿಯತ್ತಿನವರೆಂದು ಮನಶಾಸ್ತ್ರಜ್ಞರು ಹೇಳುತ್ತಾರೆ. ನಿಮ್ಮ ಬರವಣಿಗೆ ಹೀಗೆ ಮುಂದುವರಿಯಲಿ.
ಮುಂದಿನ ಪೀಳಿಗೆ ನೆಟ್ಟಿನಲ್ಲಿ ಹುಡುಕಿದಾಗ ನೀವು ಕೊಟ್ಟ ಮಾಹಿತಿ ಅವರಿಗೊಂದು ಪ್ರೀತಿಯ ಉಡುಗೊರೆ.
200812023996 ಕಾಮೆಂಟ್ ಪೋಸ್ಟ್ ಮಾಡಿ