ಭಾನುವಾರ, ನವೆಂಬರ್ 23, 2008

ಸ್ವಾಮಿ, ಈ ಕಸುಬು ಸಾಕು.....



ಅಡಿಕೆ ಮರದಿಂದ ಆ ಮರಕೆ
ಹಾರುವ ಕೊನೆಗೌಡ
ಬಡಿ ಕಾಗೆ ಹಾರಾಡುವ ಹಾಗೆ
ಭಯ-ಆ ಹಕ್ಕಿಗಿಲ್ಲ.

ಮರದ ಕೊನೆಯಲ್ಲಿ ಗೊನೆ
ಮಾಗುವ ಮುನ್ನ ಅರ್ಧಚಂದ್ರ-ಕನ್ನ
ಪಾಪ, ಆ ಮರಕೆ ಗರ್ಭಪಾತ
ಗೌಡನ ಬದುಕು!

ಮರ ದಾಟುವವನ ಕಣ್ಣು ಕೈ
ನೆರೆಯ ಫಸಲಿನ ಲೆಕ್ಕಕೆ
ಸಂಜೆಯೊಳಗೆ ಗೊನೆ-ಆರು ನೂರು
ದಿನ ಹೀಗೆ, ವರ್ಷಕ್ಕೆಷ್ಟಾದೀತು?

ಉದುರು ಆರಿಸುವ ಚಿಕ್ಕಿ,
ಶಾಲೆಗೆ ಗಿಟ್ಟದ, ಮನೆಯೊಳಗೆ ಸಲ್ಲದ
ಮಗು, ಕೆಳಗೆ ನೋಡಿದರೆ ಚುಕ್ಕೆ!
ಹೇ, ಈಗ ಕೈ ಜಾರಿದರೆ....

ಸೂರ್ಯನೆತ್ತರಕೇನು ಇಲ್ಲ ಸ್ವರ್ಗ
ನಾಳೆಗಾಗಿ ಗುರುತ್ವಾಕರ್ಷಣೆ ಮೀರಲು
ಬದುಕಿರುವುದು ನೆಲದಲ್ಲಿ ಚಿಕ್ಕಿ, ಮಗು
ಇರುವುದಲ್ಲಿ, ನೆಲಗೆಲಸ ಸಾಕು

ಒತ್ತಾಯಿಸದಿರಿ, ನನ್ನ ಮನದ
ಮೆರವಣಿಗೆ ಭಯ-
ಬದುಕ ಸಂಗಾತಿಗೆ ಕೊನೆ
ಕಸುಬು ಸಾಕು, ಹೆಗಡೇರೆ....

-ಮಾವೆಂಸ

5 comments:

Unknown ಹೇಳಿದರು...

kone gouda idanna odi bhava jeeviyagi kasubu bittare kasta kasta kasta

ಮನಸ್ವಿ ಹೇಳಿದರು...

ನಿಮ್ಮನೆ ಕೊನೆಗೌಡ ಯಾರು ಅಂದೆ, ಅವ ಓದಲೇ ಬೇಕಾದ ಕವಿತೆ, ಔಷದಿ ಹೊಡ್ಯದು ಬಿಡ್ತೆ ಹೆಗ್ಡೇರೆ ಅಂತನು ಹೇಳ್ತ ತಡಿ!ನೀವೆ ಹೊಡ್ಕಳಿ ಹೇಳ್ತ ;)

ಮಾವೆಂಸ ಹೇಳಿದರು...

ಶ್ರೀಶುಂ, ಮನಸ್ವಿಗಳು ಪ್ರತಿಕ್ರಿಯಿಸಿದ್ದನ್ನು ನೋಡಿದರೆ ಇವರಿಬ್ಬರೂ ಹೆಸರು ಪ್ರಕಟಿಸದ ಅಡಿಕೆ ಬೆಳೆಗಾರರು ಎಂಬ ದಟ್ಟ ಅನುಮಾನ ಬರುತ್ತದಲ್ಲವೇ?

jithendra hindumane ಹೇಳಿದರು...

wonderful poem...!

neevu yaavaga poet aagiddu...?

ಮಾವೆಂಸ ಹೇಳಿದರು...

*ಜಿತು,
ಇದನ್ನೂ ಕವನ ಅಂತ ಒಪ್ಪಿಕೊಂಡಿದ್ದಕ್ಕೆ ಧನ್ಯವಾದ!

 
200812023996