ಭಾನುವಾರ, ಜುಲೈ 11, 2010

ಹಣ ಕಂಡರೆ ಮೊಬೈಲ್ ಬಾಯಿಬಿಡುವುದೇ?


ಕೆಲ ವರ್ಷಗಳ ಹಿಂದೆ ಮೊಬೈಲ್‌ನಲ್ಲಿ ಎಸ್‌ಎಂಎಸ್ ಸ್ವೀಕರಿಸುವದಕ್ಕೆ ನಮಗೇ ದುಡ್ಡು ಕೊಡುವ ಕಂಪನಿಗಳ ಬಗ್ಗೆ ಬರೆದಿದ್ದೆ. ಯು ಮಿಂಟ್, ಎಂ ಜಿಂಜರ್ ಮೊದಲಾದ ಕಂಪನಿಗಳು ನಾವು ಸ್ವೀಕರಿಸುವ ಪ್ರತಿ ಎಸ್‌ಎಂಎಸ್‌ಗೆ ೧೦, ೨೫ ಪೈಸೆ ಕೊಡುವುದನ್ನು ಅಲ್ಲಿ ಬರೆಯಲಾಗಿತ್ತು. ಅಷ್ಟೇ ಅಲ್ಲ, ಈ ಅಂತರ್ಜಾಲ ಎಸ್‌ಎಂಎಸ್ ಕಂಪನಿಗಳು ೩೦೦ ಚಂದಾದಾರರನ್ನು ಒದಗಿಸಿಕೊಟ್ಟರೆ ಬೋನಸ್ ಆಗಿ ೩೦೦ರೂ. ಚೆಕ್ ಕಳಿಸಿಕೊಡುವುದನ್ನು ತಿಳಿಸಿದಂತೆ ನೆನಪು. ಆಸೆಯಿಂದ ನಾನೂ ನನ್ನ ಮಿತ್ರರಿಗೆ ಈ ಮೈಲ್ ಮಾಡಿದ್ದೆ. ೩೦೦ರೂ. ಬರಲಿ!
ಊಹ್ಞೂ, ಬರಲಿಲ್ಲ, ಬಂದಿದ್ದು ನನ್ನ ಸ್ನೇಹಿತರೊಬ್ಬರ ಫೋನ್ ಕರೆ, `ಥ್ಯಾಂಕ್ಸ್ ಕಣೋ, ನಿನ್ನ ಮೈಲ್‌ನ ನನ್ನ ದೋಸ್ತ್‌ಗಳಿಗೆ ಫಾರ್‌ವರ್ಡ್ ಮಾಡಿದೆ. ನಿನ್ನೆ ೩೦೦ರೂ. ಚೆಕ್‌ನ್ನೇ ಕಳಿಸಿದ್ದಾರೆ. ಮಜಬೂತಾಗಿದೆ ಕಣೋ ಈ ಆಫರ್!'
ಬಿಡಿ, ಕೊನೆಗೆ ನಾನು ಈ ಕುರಿತು ವಿಜಯ ಕರ್ನಾಟಕಕ್ಕೆ ಲೇಖನ ಬರೆದು ೩೦೦ರೂ. ಗಳಿಸುವ ಪ್ಲಾನ್ ಮಾಡಿದೆ. ಲೇಖನವೂ ಬಂತು, ಅವರ ಆಗಿನ ಒಪೆಡ್ ಪುಟದಲ್ಲಿ. ೨೦೦ ಅಥವಾ ೩೦೦ ಗಿಟ್ಟುತ್ತದೆಂದುಕೊಂಡೆ. ಪಾಪಿಗಳು, ಇವತ್ತಿನ ತನಕ ಗೌರವಧನ ಕಳಿಸಿಲ್ಲ!!
ಇಷ್ಟೆಲ್ಲ ದೀರ್ಘವಾಗಿ ಪೀಠಿಕೆ ಬೆಳೆಸಲು ಏಕೈಕ ಕಾರಣವಿದೆ. ಇಂದಿನ ಕಾಲಮಾನದಲ್ಲಿ ಮೊಬೈಲ್ ಹಾಗೂ ಅಂತರ್ಜಾಲಗಳನ್ನು ಬಳಸಿ ನಾವು ಜಾಹೀರಾತು ಗ್ರಾಹಕರಾಗಬಹುದು ಮತ್ತು ಅದಕ್ಕೆ ಶುಲ್ಕ ವಸೂಲಿ ಮಾಡಿಕೊಳ್ಳಬಹುದು. ಹಣ ಗಳಿಸಿಕೊಡುವ ಅವಕಾಶವೊಂದನ್ನು `ಹಾಗೆ ಸುಮ್ಮನೆ' ಬಿಡಬೇಡಿ. ವಾಸ್ತವವಾಗಿ, ಡು ನಾಟ್ ಕಾಲ್ ದಿನಗಳಲ್ಲಿ ನಾವು, ಚಂದಾದಾರರು ಜಾಹೀರಾತು ಓದುವುದಕ್ಕೆ ಶುಲ್ಕ ಪಡೆಯಲೇಬೇಕು!
ಇನ್ನೊಂದು ಹೊಸ ತಂತ್ರವೆಂದರೆ, ವೆಬ್ ಜಾಹೀರಾತು ಓದಲೂ ನಾವು ಹಣ ಪಡೆಯಬಹುದು! ಈ ಅನುಭವ ನನಗೆ ಖುಷಿ ಕೊಟ್ಟಿದೆ. ಮೈಲ್ ಸ್ನೇಹಿತರಾಗಲಿ ಅಥವಾ ವಿಕ ತರದ ಪತ್ರಿಕೆಯಾಗಲಿ ನನಗೆ ಕೈಕೊಟ್ಟಿಲ್ಲ. ನಿಮ್ಮ ಮೊಬೈಲ್‌ನ್ನು ಉಚಿತವಾಗಿ ರೀಚಾರ್ಜ್ ಮಾಡಿಸುವ ಅವಕಾಶವಿರುವುದು ಖಚಿತ. ಅದೇ Invitation to join Amulyam-Free Prepaid Mobile Recharge and Movie Tickets
">ಅಮೂಲ್ಯಂ
ವೆಬ್‌ಸೈಟ್. ಇಲ್ಲಿ ನೊಂದಣಿ ಮಾಡಿಸಿಕೊಂಡ ನಂತರ ಮೈಲ್‌ಗೆ ಬರುವ ಸೈಟ್ ಪ್ರವೇಶಿಸಿದರೆ ಮತ್ತು ಸರ್ವೆಗಳಿಗೆ ಉತ್ತರಿಸಿದರೆ ಹಾಗೂ ಈ ನೊಂದಣಿಗಳ ಮೂಲಕ ವ್ಯವಹರಿಸಿದರೆ ಕಮಿಷನ್ ಸಿಕ್ಕೀತು!
ವಿವರಗಳಿಗೆ Invitation to join Amulyam-Free Prepaid Mobile Recharge and Movie Tickets
">ಅಮೂಲ್ಯಂ
ವೆಬ್‌ಸೈಟ್ ಪ್ರವೇಶಿಸಿ. ನಾನು ನೀಡಿರುವ ಈ ಲಿಂಕ್ ಮೂಲಕವೇ ಪ್ರವೇಶಿಸಿ ಎನ್ನುವುದು ನನ್ನ ವಿನಂತಿಯಷ್ಟೇ. ಯು ಮಿಂಟ್, ಅಮೂಲ್ಯಂ ತರದವನ್ನು ನಾನು ಹೆಸರಿಸಿರುವುದು ಕೇವಲ ಪ್ರಾತಿನಿಧಿಕವಷ್ಟೇ. ನಿಮಗೆ ಇನ್ನಷ್ಟು ಇದೇ ಮಾದರಿಯ ವೆಬ್ ಗೊತ್ತಿದ್ದೀತು. ನಾನು ಹೇಳುವುದು, ಇವನ್ನು ನಿಮ್ಮ ಉಪಯೋಗಕ್ಕೆ ಬಳಸಿಕೊಳ್ಳಿ ಎಂದು ಮಾತ್ರ. ನಾನು ಅಮೂಲ್ಯಂ ಕಾರಣದಿಂದ ಹಲವು ಬಾರಿ ಮೊಬೈಲ್ ರೀಚಾರ್ಜ ಮಾಡಿಸಿಕೊಂಡಿರುವುದರಿಂದ ಅತ್ತ ವಿಶ್ವಾಸ ಬೆಳೆದಿದೆಯಷ್ಟೇ.
ಏನು ಮಾಡುವಿರಿ?
- ಮಾವೆಂಸ


3 comments:

PARAANJAPE K.N. ಹೇಳಿದರು...

ಅಂತರ್ಜಾಲದಲ್ಲಿ ಬಹುದೊಡ್ಡ ಮೊಸಜಾಲವಿದೆ. PAY PER CLICK ಎ೦ಬ concept ಅಡಿಯಲ್ಲಿ ನಮ್ಮ ಮೇಲ್ ಬಾಕ್ಸಿಗೆ ಬ೦ದು ಬೀಳುವ ಜಾಹೀರಾತು ಗಳುಳ್ಳ ಈಮೈಲ್ ತೆರೆದು ಓದಿದರೆ ಅರ್ಧ ಡಾಲರ್ ಸಿಗುತ್ತದೆ೦ಬ ಹುಚ್ಚಿನಲ್ಲಿ ನಾನು ಹಿ೦ದೆ ENROLL ಮಾಡಿಕೊ೦ಡು ನನ್ನ ಮಿ೦ಚ೦ಚೆ ಬಾಕ್ಸಿಗೆ ಬೀಳುತ್ತಿದ್ದ ರಾಶಿ ರಾಶಿ ಮೇಲ್ ಗಳನ್ನೂ ತೆರೆದು ಮುಚ್ಚಿ ಮಾಡಿ ನನ್ನ ಖಾತೆ ಬಿದ್ದಿದೆಯೆ೦ದು ತೋರಿಸಲಾಗುತ್ತಿದ್ದ ಮೊತ್ತ ನೋಡಿ ಖುಶಿಗೊಳ್ಳುತ್ತಿದ್ದೆ. ಆದರೆ ಇದೊ೦ದು ಕಳ್ಳರ ಸ೦ತೆ, ಯಾರೂ ಯಾರಿಗೂ ದುಡ್ಡು ಕೊಡುವುದಿಲ್ಲ. ಇದು ನನ್ನ ಅನುಭವ, ನಿಜವಾಗಿಯೂ ಹಣ ಕೊಡುವ ವೆಬ್ ವಿಳಾಸ ವಿದೆಯೇ ? ನಾನ೦ತೂ ನ೦ಬಲ್ಲ !!

sangamesh menasinakai ಹೇಳಿದರು...

nimma maatu keli naanu mgingerge nanna no. entry maadidde. ondu dinavu ondu paiseyu baralilla!

ಮಾವೆಂಸ ಹೇಳಿದರು...

ಕೆ.ಎನ್.ಪರಾಂಜಪೆಯವರಿಗೆ,
ಅರ್ಧ ಡಾಲರು ಗೆಲ್ಲುವ, ಬಹುಮಾನ ಕೊಡುವುದಾಗಿ ತಿಳಿಸುವ ವಂಚಕ ಕಂಪನಿಯ ಬಗ್ಗೆ ಎಚ್ಚರ ಅಗತ್ಯ. ನಮ್ಮ ಕಡೆಯಿಂದ ಅವರಿಗೇನು ಲಾಭ ಎನ್ನುವುದನ್ನೂ ಯೋಚಿಸಿ ನಾವು ಹೆಜ್ಜೆಯಿಡಬೇಕಾಗುತ್ತದೆ. ಇಲ್ಲಿ ನಾನು ಖುದ್ದು ಮೊಬೈಲ್ ರೀಚಾರ್ಜ್ ಮಾಡಿಸಿದ ಮೇಲೆಯೇ ಬ್ಲಾಗ್ ಬರೆದಿದ್ದು.
ಬೇಕಿದ್ದರೆ ಮಾತ್ರ ನೊಂದಾವಣೆ ಮಾಡಿಕೊಳ್ಳಿ.
ಇಷ್ಟಕ್ಕೂ ನಾನು ಆ ಬಗ್ಗೆ ಬರೆದಿದ್ದು ನನ್ನ ವೈಯುಕ್ತಿಕ ಲಾಭದ ಏಕೈಕ ಉದ್ದೇಶಕ್ಕಲ್ಲ. ಇಂತಹವುಗಳನ್ನು ಗ್ರಾಹಕರಾಗಿ ನಾವು ಉಪಯೋಗಿಸಿಕೊಂಡು ಅನುಕೂಲ ಪಡೆದರೆ ಅದು ಕಂಪನಿಗಳಿಗೆ ಕಳಿಸುವ ಸಂದೇಶ ಧನಾತ್ಮಕವಾದೀತು ಎಂಬ ಆಶಯ, ಇನ್ನು ಮುಂದೆ ಗ್ರಾಹಕರನ್ನು ಬರಿದೇ ಜಾಹಿರಾತಿನಿಂದ ಮರಳು ಮಾಡಲಾಗದು ಎನ್ನುವುದು ಕಂಪನಿಗಳಿಗೆ ತಿಳಿಯಬೇಕು!

ಸಂಗಮೇಶ್‌ರಿಗೆ,
ದುರಂತ,
ಎಂ ಜಿಂಜರ್ ಸೈಟ್ ಪುನರ್ನಿರ್ಮಾಣದ ಹಂತದಲ್ಲಿದೆ. ಇನ್ನು ಅದರಿಂದ ಸಂದೇಶ, ಪೈಸೆ ಹೇಗೆ ಬಂದೀತು?
ಇನ್ನೊಂದು ಪ್ರಯತ್ನ ಮಾಡುವುದಾದರೆ ಆಮೂಲ್ಯಂ ಮತ್ತು ಯು ಮಿಂಟ್ ವೆಬ್‌ಸೈಟ್‌ಗೆ ಸದಸ್ಯರಾಗಿ. ನನ್ನದು ಆ ಕಂಪನಿಗಳ ಪರವಾದ ವಕಾಲತ್ತಲ್ಲ.

 
200812023996