

ಬಹುಷಃ ಬಿಎಸ್ಎನ್ಎಲ್ ಸ್ಥಿರ ದೂರವಾಣಿ ಇರಿಸಿಕೊಂಡವರಿಗೆ ಅದರ ಕರೆ ವೆಚ್ಚದ ಬಗ್ಗೆ ಮಾಹಿತಿ ಇರುವುದಿಲ್ಲ. ಬಿಲ್ ತಿಂಗಳ ತುದಿಗಷ್ಟೇ ಬರುವುದರಿಂದ ಅತ್ತ ಯೋಚಿಸುವವರೂ ಕಡಿಮೆ. ಕೆಲ ಬುದ್ಧಿವಂತರು ಬಿಎಸ್ಎನ್ಎಲ್ನ ಉಚಿತ ಮೀಟರ್ ರೀಡಿಂಗ್ ವ್ಯವಸ್ಥೆ 1962ಕ್ಕೆ ಡಯಲ್ ಮಾಡಿ ತಮ್ಮ ಕರೆ ವೆಚ್ಚ ತಿಳಿದುಕೊಳ್ಳುವುದುಂಟು. ಆದರೆ ಈ ಸೌಲಭ್ಯ ಸದ್ಯಕ್ಕೆ ವಿಲ್ ದೂರವಾಣಿ ಗ್ರಾಹಕರಿಗಿಲ್ಲ.
ಹಾಗಾಗಿ ಕರೆ ವೆಚ್ಚದ ಈ ಪುಟ್ಟ ಮಾಹಿತಿ ನಿಮಗೆ ಕೈಗನ್ನಡಿಯಾದೀತು. ಸರಳವಾಗಿ ಹೇಳುವುದಾದರೆ, 50 ಕಿ.ಮೀ ವ್ಯಾಪ್ತಿಯ ಎಲ್ಲ ಕರೆಗಳಿಗೆ ಮೂರು ನಿಮಿಷಗಳ ಅವಧಿಗೆ ಒಂದು ಪಲ್ಸ್ ಅಂದರೆ ಈ ಅವಧಿ ಮಾತುಕತೆಗೆ ಒಂದು ಕರೆ ವೆಚ್ಚ ಈ ಅಂತರ ಮೀರಿದ ಪ್ರತಿ ಕರೆಗೆ ಒಂದು ನಿಮಿಷಕ್ಕೆ ಒಂದು ಪಲ್ಸ್. ಯಾವುದೇ ಕಂಪನಿಯ ಮೊಬೈಲ್ಗೂ ಒಂದು ನಿಮಿಷಕ್ಕೆ ಒಂದು ಪಲ್ಸ್.
ಮತ್ತೆ ಗೊಂದಲ ಕಾಡಬಹುದು. ಈ 50 ಕಿ.ಮೀ. ಅಂತರವನ್ನು ಹೇಗೆ ನಿಗದಿಪಡಿಸುವುದು? ನಾವೇ - ಬಿಎಸ್ಎನ್ಎಲ್ನವರೇ? ತಾಂತ್ರಿಕ ಭಾಷೆಗಳನ್ನು ಬಿಟ್ಟಾಕಿಬಿಡೋಣ. ಒಬ್ಬ ಸಾಮಾನ್ಯ ಗ್ರಾಹಕನಿಗೆ ಅರ್ಥವಾಗುವಂತೆ ಈ ಕೆಳಗಿನ ಉದಾಹರಣೆಯಿದೆ.
ಸಾಗರ ಮತ್ತು ಸುತ್ತಮುತ್ತಲಿನ ದೂರವಾಣಿ ವಿನಿಮಯ ಕೆಂದ್ರಗಳ ಕೋಡ್ ನಂಬರ್08183. ಈ ಕೋಡ್ ಇರುವ ಗ್ರಾಹಕರೆಲ್ಲ ಒಂದು ವರ್ಗ. ಇವರಿಗೆ 08389(ಸಿದ್ಧಾಪುರ),08185 (ಸೊರಬ) , 08184 (ಹೊಸನಗರ), 08187 (ಶಿಕಾರಿಪುರ) ಕೋಡ್ ಸಹಿತದ ದೂರವಾಣಿ ಸಂಖ್ಯೆಗಳು 50ಕಿ.ಮೀ. ವ್ಯಾಪ್ತಿಯೊಳಗೇ ಇವೆ. ಅಂದರೆ ಇವರಿಗೆ ಮಾಡುವ ಕರೆಗೆ ಮೂರು ನಿಮಿಷದ ಅವದಿ. ಉಳಿದವಕ್ಕೆಲ್ಲ ಒಂದು ನಿಮಿಷದ ಪಲ್ಸ್.
ನಮ್ಮ ಉಳಿದ ಪ್ರದೇಶದ ಓದುಗರು ಸುಲಭವಾಗಿ ಕರೆ ವೆಚ್ಚ ತಿಳಿದುಕೊಳ್ಳಲು ಇಷ್ಟು ಮಾಡಿದರೆ ಸಾಕು. ತಮ್ಮ ಏರಿಯಾದ ಅಕೌಂಟ್ಸ್ ಆಫೀಸರ್ಗೆ ಫೋನ್ ಮಾಡಿ 50 ಕಿ.ಮೀ. ವ್ಯಾಪ್ತಿಗೆ ಬರುವ ಕೋಡ್ನಂಬರ್ಗಳನ್ನು ತಿಳಿದುಕೊಂಡರೆ ಆಯ್ತು.
ಇನ್ನೂ ಅನುಮಾನವೇ? ಬಿಎಸ್ಎನ್ಎಲ್ನ ಉಚಿತ ಗ್ರಾಹಕ ಸೇವಾ ಕೇಂದ್ರ 1500ಗೆ ಕರೆ ಮಾಡಿ ವಿಚಾರಿಸಿಕೊಳ್ಳಿ.
-ಮಾವೆಂಸ
4 comments:
ಮಾಹಿತಿ ಉಪಯುಕ್ತ. ಚಿಕ್ಕದೊಂದು ತಿದ್ದುಪಡಿ. ರಾಜ್ಯದೊಳಗೆ ಆದರೆ ೫೦ ಕಿಮಿ ಹೊರಗಿರುವ ಬಿಎಸೆನೆಲ್ ಸ್ಥಿರವಾಣಿಗೆ ಎರಡು ನಿಮಿಷ ಪಲ್ಸ್ ಅವದಿ. ಉದಾಹರಣೆ ಸಾಗರದಿಂದ ಮಂಗಳೂರು ಅಥವಾ ಬೆಂಗಳೂರಿನಲ್ಲಿರುವ ಬಿಎಸೆನೆಲ್ ಸ್ಥಿರವಾಣಿಗೆ. ಇತರ ಸಂಸ್ಥೆಗಳ ಸ್ಥಿರವಾಣಿಗೆ ಇದು ಅನ್ವಯವೋ ಎನ್ನುವುದು ನನಗೆ ಪೂರ್ತಿ ಸ್ಪಷ್ಟವಾಗಿಲ್ಲ.
"೯೫" ಸೇವೆಯನ್ನು ತೆಗೆಯಲಾಗಿದೆ.ಈಗ ಎಸ್.ಟಿ.ಡಿ ಸೇವೆ "೦" ದಿಂದಲೇ ಆರಂಭವಾಗುತ್ತದೆ ಅಲ್ಲವೇ?
* ಗೋವಿಂದ ನೆಲ್ಯಾರು,
ಇತರ ಸಂಸ್ಥೆಗಳ ಸ್ಥಿರವಾಣಿಗಳಿಗೂ ಇದು ಅನ್ವಯ. ಬಹುಶಃ ಟಾಟಾ ವಿಲ್ ಫೋನ್ ನಲ್ಲಂತೂ ರಾಜ್ಯದ ಯಾವುದೇ ಲ್ಯಾಂಡ್ ಫೋನ್ ಗೆ ೩ ನಿಮಿಶದ ಕರೆಯಂತೆ!
*ನಿತಿನ್ ಮುತ್ತಿಗೆ,
ನಿಜ, ೯೫ ಈಗಿಲ್ಲ. ೫೦ ಕಿ.ಮೀ. ಹೊರಗಿನ ಎಲ್ಲ ದೂರವಾಣಿಗಳಿಗೆ "೦" ಹಾಕಿ ಡಯಲ್ ಮಾಡಬೇಕು. ಲೇಖನದಲ್ಲಿ ತಿದ್ದುಪಡಿ ಮಾಡಿರುವೆ. ತಪ್ಪು ತೋರಿಸಿದ್ದಕ್ಕೆ ವಂದನೆ.
"08185 (ಸೊರಬ) , 08184 (ಹೊಸನಗರ)," ಎಂಬಲ್ಲಿ ಸೊರಬ ಮತ್ತು ಹೊಸನಗರದ ’ಕೋಡು’ಗಳು ತಪ್ಪಾಗಿವೆ.
ಸರಿಯಾದ ಕೋಡುಗಳು.
ಸೊರಬ- 08184
ಹೊಸನಗರ - 08185
200812023996 ಕಾಮೆಂಟ್ ಪೋಸ್ಟ್ ಮಾಡಿ