

ನವದೆಹಲಿಯ ಕನ್ಸೂಮರ್ ವಾಯ್ಸ್ ಸಂಘಟೆನೆ ವ್ಯವಸ್ಥಿತವಾದುದು. ಇದರ ತಂಡ ನಡೆಸುವ ಕೆಲಸಗಳು ಹಲವು. ೨೪ ಘಂಟೆ, ವಾರದ ಏಳೂ ದಿನ ಕಾರ‍್ಯ ನಿರ್ವಹಿಸುವ ಸಹಾಯ ದೂರವಾಣಿ ಸೇವೆ (೦೧೨೪-೩೯೮೯-೮೦೮೦) ನಡೆಸುವುದೂ ಅದರಲ್ಲೊಂದು. ಇದು ತನ್ನ ಪ್ರಯೋಗಾಲಯದಲ್ಲಿ ಗ್ರಾಹಕ ಬಳಕೆ ತಯಾರಿಕೆಗಳ ಪರೀಕ್ಷೆ ನಡೆಸುತ್ತದೆ. ಇತ್ತೀಚೆಗೆ ಅದು ಮಾರುಕಟ್ಟೆಯಲ್ಲಿ ಸಿಗುವ ಸಿದ್ಧ ಟೋಮಾಟೋ ಕೆಚಪ್‌ಗಳ ಪರೀಕ್ಷಾ ವರದಿಯನ್ನು ಬಿಡುಗಡೆ ಮಾಡಿದೆ. ಓದುಗರಿಗಾಗಿ ಆ ಮಾಹಿತಿಗಳು ಇಲ್ಲಿವೆ.
ಸ್ವಾರಸ್ಯವೆಂದರೆ, ಭಾರತದ ಪ್ರಮುಖ ಬ್ರಾಂಡ್‌ಗಳಾದ ಮ್ಯಾಗ್ಗಿ ಮತ್ತು ಕಿಸಾನ್‌ಗಳಿಗಿಂತ ಪಿಟ್ಸ್‌ಬರ್ಗ್ ಮೂಲದ ಹೈಂಜ್ (Heinz))
ಹೆಚ್ಚು ಅಂಕ ಗಳಿಸಿದ್ದು! ಯಾವುದೇ ರಾಸಾಯನಿಕ ಪ್ರಿಜರ್‌ವಿಟಿವ್ ಬಳಸದ, ಸಮತೋಲಿತವಾಗಿ ಸಕ್ಕರೆ ಬೆರೆಸಿರುವ ಹೈಂಜ್‌ಗೆ, ಪ್ರಥಮ ಸ್ಥಾನ- ಇದು ಕೆ.ಜಿ. ಬಾಟಲ್‌ಗೆ ೭೯ರೂ. ಅಮೆರಿಕದಲ್ಲಿ ಟೊಮಾಟೋ ಕೆಚಪ್ ಎಂದರೆ ಹೈಂಜ್ . ಬರುವ ದಿನಗಳಲ್ಲಿ ಭಾರತದಲ್ಲೂ ಅದರದ್ದೇ ಮಾತಾದರೂ ಅಚ್ಚರಿಯಿಲ್ಲ.
ನಂತರದ ಸ್ಥಾನ ಕಿಸಾನ್ ಕೆಚಪ್‌ಗೆ, ೧೯೮೦ರ ದಶಕದವರೆಗೂ ನಾವು ಕೆಚಪ್ ತಯಾರಿಕೆಯಲ್ಲಿ ಕಿಸಾನ್ ಬಿಟ್ಟರೆ ಬೇರೆ ಹೆಸರು ಕೇಳಿದ್ದಿಲ್ಲ. ಆನಂತರವೇ ಮ್ಯಾಗ್ಗಿ ಬಂದಿದ್ದು ವಾಸ್ತವವಾಗಿ, ಮೂರನೇ ಸ್ಥಾನದಲ್ಲಿರುವ ಮ್ಯಾಗ್ಗಿಗೂ ಕಿಸಾನ್‌ಗೂ ಗುಣಾವಗುಣಗಳಲ್ಲಿ ಅಂತಹ ಅಂತರವೇನೂ ಇಲ್ಲ, ಬೆಲೆಯಲ್ಲೂ, ಕಿಸಾನ್‌ಗೆ ೮೫ರೂ. ಮ್ಯಾಗ್ಗಿಗೆ ಇನ್ನೊಂದು ರೂಪಾಯಿ ಜಾಸ್ತಿ. ಉಳಿದಂತೆ ಉತ್ತಮ ಎನ್ನಬಹುದಾದದ್ದು, ಅನುಕ್ರಮ ರ‍್ಯಾಂಕಿಂಗ್‌ನಲ್ಲಿ ಟಾಪ್ಸ್, ಕ್ರೆಮಿಕಾ, ಟೇಸ್ಟಿ ಟ್ರೀಟ್, ಡ್ರಕ್, ಸ್ಮಿತ್ ಎಂಡ್ ಜೋನ್ಸ್, ಇಟ್ಸ್ ಫ್ರೂಟ್, ಪ್ಯಾನ್ ಕೆಚಪ್‌ಗಳಿವೆ.
ಅದೃಷ್ಟಕ್ಕೆ ಭಾರತದ ಎಲ್ಲ ತಯಾರಿಕೆಗಳಲ್ಲಿ ಅರ್ಸೆನಿಕ್, ಸೀಸದ ಅಂಶ ಬಿಐಎಸ್ ನಿಗದಿ ಪಡಿಸಿದ ೧.೧ ಪಿಪಿಎಂಗಿಂತ ಕಡಿಮೆಯೇ ಇದೆ. ಭೂತಾನ್ನ ಡ್ರಕ್ ಕೆಚಪ್ ಪ್ಯಾಕ್ ಮೇಲೆ ಎಫ್‌ಪಿ ಓ ಗುರುತಿಲ್ಲ, ತಯಾರಕರ ಪರವಾನಗಿ ಸಂಖ್ಯೆ ನಮೂದಿಸಿಲ್ಲ. ಸಂಗ್ರಹಿಸಿಡುವ ಕುರಿತ ಮಾಹಿತಿ ಕೇಳಬೇಡಿ. ಅಷ್ಟಕ್ಕೂ ಮ್ಯಾಗ್ಗಿ, ಇಟ್ಸ್ ಫ್ರೂಟ್‌ನಲ್ಲಿ ಮಾತ್ರ ಅಡಕದ ಜೀವ ದ್ರವ್ಯಗಳು ( ನ್ಯೂಟ್ರಿಷನ್) ಯಾವುವು ಎಂಬ ಮಾಹಿತಿಯಿದೆ.
ಇದೊಂದೆಡೆಯಾದರೆ, ಕೆಚಪ್‌ನ ಗುಣಮಟ್ಟ ತಿಳಿದುಕೊಳ್ಳಲು ಇನ್ನೊಂದು ಸರಳ ಮಾದರಿಯಿದೆ ಕೆಚಪ್ ಬಾಟಲಿಯಲ್ಲಿ ಕಣ್ಣರಳಿಸಿ ಗಾಢವಾಗಿ ನೋಡಿ. ಅದರಲ್ಲಿನ ನೀರು ಪ್ರತ್ಯೇಕವಾಗಿ ಕಾಣಿಸಬಾರದು. ಪ್ಯಾನ್ ಕೆಚಪ್ ಬಾಟಲಿಯಲ್ಲಿ ಇಣುಕಿದ ಕನ್ಸೂಮರ್ ವಾಯ್ಸ್‌ಗೆ ನೀರು ಕಾಣಿಸಿತ್ತು!
ಕೆಲವು ಕಾನೂನುಗಳಿವೆ. ಕೆಚಪ್ ತಯಾರಿಕೆಗೆ ಅನುಮತಿ ಪಡೆದವರು ಕೇವಲ ಟೊಮಾಟೋದ ಕೆಚಪ್ ಮಾಡಬೇಕು. ಬೇರಿನ್ನಾವುದೇ ಮಾದರಿಯ ಕೆಚಪ್‌ಗೆ ಕಾನೂನಿನಲ್ಲಿ ಅವಕಾಶವಿಲ್ಲ. ಪ್ರತಿಯೊಂದು ಕೆಚಪ್‌ನಲ್ಲಿ ಟೊಮಾಟೋವೇ ಮುಖ್ಯ ಅಂಶವಾಗಿರಬೇಕು.
ಹಾಗೆಂದಾದರೆ ನಿಜಕ್ಕೂ ಈ ಕೆಚಪ್ ಗಳಲ್ಲಿ ಇರುವ ಟೊಮಾಟೋ ಪ್ರಮಾಣ ವೆಷ್ಟು? ಇದರ ಮಾಹಿತಿಗೆ ಲೈಕೋಪೀನೆ ಪರೀಕ್ಷೆ ನಡೆಸಲಾಗುತ್ತದೆ. ಟೇಸ್ಟಿ ಟ್ರೀಟ್ ೧೪.೭೫ ಎಂಜಿ/೧೦೦ ಗ್ರಾಂ. ಲೈಕೋಪೀನೆ ಹೊಂದಿದ್ದರೆ, ಮ್ಯಾಗ್ಗಿಯಲ್ಲಿ ೧೩.೫೪. ಇವು ಈ ಕ್ಷೇತ್ರದ ಗರಿಷ್ಠ ಫಲಿತಾಂಶ. ಕೆಚಪ್‌ನ ಹೆಸರು ‘ಇಟ್ಸ್ ಫ್ರೂಟ್’ ಎಂದಿದ್ದರೂ ಅದರಲ್ಲಿರುವ ಲೈಕೋಪೀನೆ ಕೇವಲ ೩.೭೯. ಒಂದು ವೆಬ್‌ಸೈಟ್ ಪ್ರಕಾರ, ಕೆಚಪ್‌ನಲ್ಲಿ ೧೭ ಎಂಜಿ/೧೦೦ ಗ್ರಾಂ. ಲೈಕೋಪೀನೆ ಇರಬೇಕು. ಆ ಲೆಕ್ಕದಲ್ಲಿ, ಎಲ್ಲಾ ೧೦ ಬ್ರಾಂಡ್‌ಗಳಲ್ಲಿ ಟೋಮಾಟೋ ಪ್ರಮಾಣದಲ್ಲಿಯೇ ಬರ!
ಕೆಚಪ್‌ಗೆ ಯೀಸ್ಟ್ (ಗಡ್ಡ, ಮೀಸೆ!) ಬರದಂತೆ ತಡೆಯುವುದು ಅಸೆಟಿಕ್ ಆಸಿಡ್ ಬಿಐಎಸ್ ೧.೨ ಶೇ.ದವರೆಗಿನ ಪ್ರಮಾಣವನ್ನು ಅನುಮೋದಿಸಿದೆ. ಪ್ಯಾನ್ ಬ್ರಾಂಡ್‌ನಲ್ಲಿ ಕೇವಲ ೦.೯೯ ಶೇ. ಆಸಿಟಿಕ್ ಆಸಿಡ್ ಇರುವುದು, ಅತ್ಯಂತ ಕನಿಷ್ಠ ಕ್ರೆಮಿಕಾದಲ್ಲಿ ಮಿತಿದಾಟಿ, ಶೇ. ೧.೪೪ ಹೈಂಜ್‌ನಲ್ಲಿ ಶೇ. ೧.೩೫ ಪ್ರಮಾಣದಲ್ಲಿ ಇದೆಯಾದರೂ ಅದು ನೈಸರ್ಗಿಕ ವಿನೆಗರ್‌ನ್ನು ಬಳಸುತ್ತಿದ್ದೇವೆ ಎನ್ನುತ್ತದೆ. ಯಾವುದೇ ಕೆಚಪ್ ಬ್ರಾಂಡ್‌ನಲ್ಲಿ ಪ್ರಿಜರ‍್ವೇಟಿವ್ ಆಗಿರುವ ಬೆಂಜೋಯಿಕ್ ಆಸಿಡ್ ಬಿಐಎಸ್ ಮಾನದಂಡ ದಾಟಿಲ್ಲ.
ಒಂದು ಮಾತು ನೆನಪಿರಲಿ. ಕೆಚಪ್‌ಗಳ ಆಯುಸ್ಸು ನಿಕ್ಕಿ ಒಂದು ವರ್ಷ, ಅದನ್ನು ಮೀರಿ ಬಳಸುವುದು ಆರೋಗ್ಯಕ್ಕೆ ಏನೇನೂ ಕ್ಷೇಮವಲ್ಲ.
0 comments:
200812023996 ಕಾಮೆಂಟ್ ಪೋಸ್ಟ್ ಮಾಡಿ