
ಬೈಕ್ಗೆ ಪೆಟ್ರೋಲ್ ಹಾಕಿಸುವವರು ಬಂಕ್ನಲ್ಲಿ ಹೇಳುವುದು "100ರೂ.ನದು ಹಾಕಿ" ಎಂದು. ಮೀಟರ್ ಜಂಪಿಂಗ್ ಕಿತಾಪತಿಗಳನ್ನೆಲ್ಲ ಬಿಟ್ಟರೂ ಆತ ನೂರು ರೂಪಾಯಿಗೆ ಹಾಕುವುದು 1.97ಲೀ. ಪೆಟ್ರೋಲ್. ಖಡಕ್ಕಾಗಿ ಲೆಕ್ಕ ಹಾಕಿದರೆ ಇಷ್ಟು ಪೆಟ್ರೋಲ್ಗೆ ತಗಲುವುದು99.54ರೂ. ಮಾತ್ರ! [ಸಾಗರದ ಬೆಲೆ ಲೀ.ಗೆ ರೂ.50.53ಅನ್ವಯಿಸಲಾಗಿದೆ] ಅಂದರೆ ನೂರು ರೂ. ಪೆಟ್ರೋಲ್ ಹಾಕಿಸಿದಾಗ ಬಂಕ್ನವರಿಗೆ ಅನಾಮತ್ತು 46ಪೈಸೆ ಲಾಭ! ಕಮಿಷನ್ ವಗೈರೆಗಳದು ಬೇರೆ ಲೆಕ್ಕ. ಬಂಕ್ನಲ್ಲಿ ದಿನವೊಂದಕ್ಕೆ300-600 ಜನ ಹೀಗೆ ‘ಚಿಲ್ಲರೆ’ ಬಿಟ್ಟರೂ 150-200ರೂ. ಉಳಿಯುತ್ತದೆ. ಬಂಕ್ ಮಾಲಿಕ ಪೆಟ್ರೋಲ್ ಬಿಡುವವನಿಗೆ ಸಂಬಳ ಕೊಡದಿದ್ದರೂ ನಡೆಯುತ್ತದೆ!
ಸಾಗರದ ಬಳಕೆದಾರರ ವೇದಿಕೆ ಪೆಟ್ರೋಲಿಯಂ ಸಚಿವಾಲಯಕ್ಕೆ ಪತ್ರ ಬರೆದಿದೆ. ಲೀಟರ್ಗೆ ತಗಲುವ ಬೆಲೆಯನ್ನು ‘ರೌಂಡ್ ಅಪ್’ ಮಾಡಿ ಈ ಹೆಚ್ಚುವರಿ ಪೈಸೆಗಳ ಮೊತ್ತವನ್ನು ಗ್ರಾಹಕ ಹಿತರಕ್ಷಣಾ ನಿಧಿಗೆ ಹೋಗುವಂತೆ ನಿರ್ದೇಶಿಸಿ’ ಎಂದು. ಈವರೆಗೆ ಆ ಕ್ರಮ ಜಾರಿಗೊಂಡಿಲ್ಲ. ನಾಗರಿಕ ಹಣ ವ್ಯರ್ಥ ವ್ಯಯವಾಗುತ್ತಿದೆ.
ಒಂದು ಚಿಲ್ಲರೆ ಬುದ್ಧಿವಂತಿಕೆಗೆ ಅವಕಾಶವಿದೆ! ನೂರು ರೂ. ಬದಲು 142ರೂ.ನ ಪೆಟ್ರೋಲ್ ಹಾಕಿಸಿ. 2.81ಲೀ. ಬೆಲೆ ಖಡಕ್ಕಾಗಿ 142ರೂ. ಬಂಕ್ನವನಿಗೆ ಅನಾಮತ್ತು ಕೊಡುವ ಪೈಸೆ ಉಳಿಯುತ್ತದೆ. ಬಂಕ್ನವನಿಗೆ ಉಳಿಯುವ ಪೆಟ್ರೋಲ್ 0.0002118 ಪ್ರಮಾಣದಲ್ಲಿ!!
ಈ ರೀತಿ ಯಾವ ಮೊತ್ತಕ್ಕೆ ಪರಮಾವಧಿ ಪೆಟ್ರೋಲ್ ಬರುತ್ತದೆಂಬ ಅಂಕಿ ಅಂಶ ಕೈಯಲ್ಲಿಟ್ಟುಕೊಂಡರೆ ಗ್ರಾಹಕರಿಗೆ ಲಾಭ. ಬೆಲೆಯಲ್ಲಿ ಮುಂದೆ ವ್ಯತ್ಯಯಯವಾದರೂ ಈ ಸೂತ್ರ ಗಿಟ್ಟೀತು!
-ಮಾವೆಂಸ
3 comments:
dannyavadagalu ...olle mahiti kottidakke........
ತುಂಬಾ ಧನ್ಯವಾದಗಳು.
ನಾನು ಮೂರುದಿನಕ್ಕೊಮ್ಮೆ ಎರಡು ಲೀಟರ್ ಹಾಕಿಸುತ್ತೇನೆ. ಈಗ ಹೊಸದಾಗಿ ನನ್ನದೇ ಲೆಕ್ಕವನ್ನು ಮಾಡಬೇಕೆನಿಸುತ್ತದೆ...
ನಾಳೆ ಕಾರಿಗೆ ಪಟ್ರೋಲ್ ಹಾಕುವಾಗ ನಿಮ್ಮ ಸೂತ್ರ ಅಳವಡಿಸ್ತೇನೆ
200812023996 ಕಾಮೆಂಟ್ ಪೋಸ್ಟ್ ಮಾಡಿ