ಮಂಗಳವಾರ, ಜೂನ್ 9, 2009

ಬಣ್ಣದ ಉಡುಗೆ!ಅನಾ ಇವಾನೋವಿಕ್ ಮಹಿಳಾ ಟೆನಿಸ್‌ನಲ್ಲಿ ಸೌಂದರ್ಯಕ್ಕೆ ಹೊಸ ಅರ್ಥ ಕೊಟ್ಟವರು. ಅವರು ಧರಿಸುವ ವಿಶಿಷ್ಟ ಮಾದರಿಯ ನೇರಳೆ ಬಣ್ಣದ ಶರ್ಟ್, ಸ್ಕರ್ಟ್ ಗಮನ ಸೆಳೆಯದೆ ಇರದು. ಅತ್ತ ಸೆರೆನಾ, ವೀನಸ್ ವಿಲಿಯಮ್ಸ್‌ಗಳು, ಶರಪೋವಾ ಮತ್ತಿತರರು ಸೆಕ್ಸಿ, ಸೆಕ್ಸಿ ಉಡುಪುಗಳಿಂದ ದೇಹದ ಓರೆಕೋರೆಗಳನ್ನು ಢಾಳಾಗಿ ತೋರಿಸುವಾಗ ಅನಾರದು ಮುಚ್ಚಿಟ್ಟ ಚೆಲುವು! ಹಾಗಿದ್ದೂ ಈ ಉಡುಗೆ ತೊಟ್ಟರೆ ಪೋಲೀಸರು ಬಂಧಸುತ್ತಾರೆಂದರೆ?
ಕಳೆದ ವರ್ಷ. ಅನಾ ಇನ್ನೂ ಗ್ರಾನ್‌ಸ್ಲಾಂ ಗೆದ್ದಿರಲಿಲ್ಲ. ಫೈನಲ್‌ನಲ್ಲಿ ಸೋಲುವುದು ಪದ್ಧತಿ. ಗೆಲ್ಲುವ ಇನ್‌ಸಿಂಗ್ಟ್ ಗಳಿಸಲು ಆಕೆಯ ಕೋಚ್ ಒಂದು ಸವಾಲು ಹಾಕಿದರು, ‘ನೀನು ಫ್ರೆಂಚ್ ಓಪನ್ ಗೆದ್ದರೆ ನಾನು ಅಲ್ಲಿನ ಆರ್ಕ್ ಡಿ ಟ್ರಿಯೋಮ್ಪೆಯನ್ನು ಒಂದು ಸುತ್ತು ಸುತ್ತಿಬರುವೆ.’ ಅನಾ ಸವಾಲು ಸ್ವೀಕರಿಸಿದಳು. ಫ್ರೆಂಚ್ ಓಪನ್ ಗೆದ್ದೇಬಿಟ್ಟಳು. ಮಾತಿಗೆ ತಪ್ಪದ ಕೋಚ್ ಟ್ರಿಯೋಮ್ಪೆಯನ್ನು ಸುತ್ತುವಾಗ ಹಿಂದಿನಿಂದ ಪೋಲೀಸರು ಬೆನ್ನತ್ತಬೇಕೆ? ಅಂತೂ ಹೋಟೆಲ್ ಸೇರಿದ ಕೋಚ್ ಉಸ್ಸೆನ್ನುತ್ತ ತಾವು ತೊಟ್ಟ ಉಡುಗೆ ಕಳಚಿ ಹಾಕಿದರು. ಮಂಚದ ಆ ಬದಿಗೆ ಬಿತ್ತು ಅದೇ, ಅನಾ ಇವಾನೋವಿಕ್ ಹಾಕಿಕೊಳ್ಳುವ ನೇರಳೆ ಬಣ್ಣದ ಸ್ಕರ್ಟ್!!
ಅರ್ಥವಾಗದವರು ಮತ್ತೆ ಮೊದಲಿನಿಂದ ಓದಬೇಕು!

-ಮಾವೆಂಸ

2 comments:

shivu.k ಹೇಳಿದರು...

ಎರಡು ಬಾರಿ ಓದಿದರೂ ಅರ್ಥವಾಗಲಿಲ್ಲ. ಅದ್ರೆ ಫೋಟೋ ನೋಡಿ ಖುಷಿಯಾಯ್ತು...ಹಿ..ಹಿ...ಹಿ....ಒಹೋ...

ಮಾವೆಂಸ ಹೇಳಿದರು...

*ಶಿವು ಮತ್ತು ಇತರ ಸ್ನೇಹಿತರಿಗೆ.....
ನಿಜ, ಹಲವು ಮಿತ್ರರು ಎಸ್ಟು ಬಾರಿ ಓದಿದರೂ ಅರ್ಥ ಆಗಲಿಲ್ಲ ಎಂದಿದ್ದಾರೆ. ಹಾಗಾಗಿ ಈ ವಿವರಣೆ.
ಅನಾ ಸದಾ ಹಾಕುವುದು ನೀಲಿ ಬಣ್ಣದ ಉಡುಗೆ. ಕೋಚ್ ಹೇಳಿದ್ದು, ನೀನು ಸ್ಲಾಂ ಗೆದ್ದರೆ ನಿನ್ನದೇ ನೀಲಿ ಡ್ರೆಸ್ ತೊಟ್ಟು ಒಂದು ಸುತ್ತು ಪೇಟೆ ತಿರುಗುತ್ತೇನೆ ಎಂದು. ಹುಡುಗಿ ಸ್ಕರ್ಟ್ ಹಾಕಿ ಓಡಾಡಿದರೆ ಗಂಡಸನ್ನು ಪೋಲೀಸರು ಹಿಡಿದಾಕದೆ ಏನು ಮಾಡುತ್ತಾರೆ?
ಅದಲ್ಲ ವಿಷಯ, ನೀವು ಓದದೆ ಬರೀ ಇಲ್ಲಿದ್ದ ಚಿತ್ರ ನೋಡಿದಿರೋ ಅಂತ???

 
200812023996