ಭಾನುವಾರ, ಫೆಬ್ರವರಿ 15, 2009

ರಿಯಾಲಿಟಿ ಷೋನ ವಾಸ್ತವ?ಇಂದು ಮಕ್ಕಳ ಗಾಯನದ ರಿಯಾಲಿಟಿ ಷೋ ಎಂಬ ಆಂಗ್ಲ ಹೆಸರಿನ ಕಾರ್ಯಕ್ರಮ ಎಲ್ಲ ಚಾನೆಲ್‌ಗಳಲ್ಲಿ ಪ್ರಸಾರವಾಗುತ್ತದೆ. ಸೀಸೆ ಬೇರೆ, ಮದ್ಯ ಅದೇ ಎಂಬಂತೆ! ಬಹುಷಃ ಯಾರೂ ಇದಕ್ಕೆ ಪ್ರತಿಭಾ ಶೋಧ ಎನ್ನುವ ಕನ್ನಡದ ಹೆಸರಿನಿಂದ ಕರೆಯಲು ಯೋಚಿಸಿದಂತಿಲ್ಲ.
ಅದಿರಲಿ, ಈ ರಿಯಾಲಿಟಿ ಕಾರ್ಯಕ್ರಮಗಳು ನೇರವಾಗಿ ರಿಕಾರ್ಡಿಂಗ್ ಆಗಿರುತ್ತವೆ. ನೇರ ಸಂಕಲನ ಆಗಿರಬೇಕು ಎಂಬುದು ಸಾಮಾನ್ಯ ತಿಳಿವಳಿಕೆ. ಅಂದರೆ, ಮಗುವೊಂದು ಹಾಡುವಾಗ ಪ್ರೇಕ್ಷಕನೋರ್ವ ಆಕಳಿಸಿದ್ದು ಅದೇ ವೇಳೆಯ ಕ್ಲಿಪ್ಪಿಂಗ್‌ನಲ್ಲಿ ಅಡಕವಾಗಿರಬೇಕೆ ವಿನಃ ಸಂಕಲನಕಾರ ತನಗೆ ಬೇಕಾದಾಗ ತೂರಿಸುವಂತಿಲ್ಲ. ಅದಕ್ಕೆ ‘ನೇರ ಸಂಕಲನ’ ಎನ್ನಲಾಗುತ್ತದೆ. ವಿಚಿತ್ರವೆಂದರೆ ಜಿ ಕನ್ನಡದ ಗಾಯನ ಸ್ಪರ್ಧೆಯ ಪ್ರಸಾರದಲ್ಲಿ ಗಮನಿಸಿದಂತೆ, ಪ್ರೇಕ್ಷಕರ ಒಂದೇ ಭಾವಭಂಗಿಯನ್ನು ಹಲವು ಬಾರಿ ತೋರಿಸಿಬಿಡುತ್ತಾರೆ. ಒಟ್ಟಾರೆ ನೋಡುಗನಿಗೆ ಎಲ್ಲವೂ ಆಕರ್ಷಕವಾಗಿರಬೇಕೆಂಬ ನೀತಿಯೇ ಇದಕ್ಕೆ ಕಾರಣ. ಚಪ್ಪಾಳೆ ತಟ್ಟಿದ್ದರಿಂದ ಹಿಡಿದು ಹಲವು ದೃಶ್ಯಗಳು ಚಾನೆಲ್ ನಿರ್ಮಿತ ಎನ್ನಿಸುತ್ತದೆ. 
ಸ್ವಾರಸ್ಯವೆಂದರೆ, ಈಗಿನ ಸರಿಗಮಪ ಹಾಡುವ ಕಾರ್ಯಕ್ರಮದ ಶೀರ್ಷಿಕೆಯಲ್ಲಿ ಇರುವ ಪದಗಳಲ್ಲಿ ‘ಸರಿಗಮಪ’ದ ಐದು ಅಕ್ಷರ ಮಾತ್ರ ಕನ್ನಡ. ಉಳಿದದ್ದೆಲ್ಲ ಆಂಗ್ಲ. ಸರಿಯೇ? 

-ಮಾ.ವೆಂ.ಸ.

2 comments:

ಮಾವೆಂಸ ಹೇಳಿದರು...

ಚಾಮರಾಜ ಸವಡಿ ಅನಿವಾರ್ಯವಾಗಿ ನನ್ನ ಮೈಲ್ ಖಾತೆಯಲ್ಲಿ ಬರೆಯುತ್ತಾರೆ......
ರಿಯಾಲಿಟಿ ಷೊ ಕುರಿತ ನಿಮ್ಮ ಬ್ಲಾಗ್‌ ಲೇಖನಕ್ಕೆ ಈ ಪ್ರತಿಕ್ರಿಯೆ.

"ಲೇಖನ ತುಂಬಾ ಚಿಕ್ಕದಾಯಿತು ಮಾವೆಂಸ ಅವರೇ. ರಿಯಾಲಿಟಿ ಷೋಗಳ ಹೆಸರಿನಲ್ಲಿ ಬರುತ್ತಿರುವ ಅತಿರೇಕಕ್ಕೆ ಮುಖ್ಯ ಕಾರಣ ಪೋಷಕರು. ಟಿವಿಯಲ್ಲಿ ಮುಖ ಕಾಣಿಸುವುದನ್ನೇ ಜೀವನದ ಪರಮಭಾಗ್ಯ ಎಂಬಂತೆ ವರ್ತಿಸುತ್ತಿರುವ ಇಂಥವರು, ತಮ್ಮ ಮಕ್ಕಳನ್ನು ಸರಕಿನಂತೆ ತಂದು ಇಲ್ಲಿ ಮಾರಲು ಬಿಡುತ್ತಾರೆ. ಉತ್ತಮ ಬೆಲೆ ಬಂದರೆ ಖುಷಿ, ಕಡಿಮೆಯಾದರೆ ದುಃಖ. ಪ್ರತಿಭೆ ಎಂಬುದು ಕೆಲವೇ ನಿಮಿಷಗಳಲ್ಲಿ, ನಿಗದಿತ ಮಾದರಿಯಲ್ಲಿ ಸಾಧಿಸಿ ತೋರಿಸಬೇಕಾದ ಅನಿವಾರ್ಯತೆ ಎಂಬಂತೆ ಷೋಗಳು ನಡೆಯುತ್ತಿವೆ. ಜನರಿಗೆ ಮೊದಲು ಬುದ್ಧಿಯಿಲ್ಲ. ಅವರ ಮೂರ್ಖತನವನ್ನೇ ಚಾನೆಲ್‌ಗಳು ಬಳಸಿಕೊಳ್ಳುತ್ತಿವೆ. "

ಅಲ್ಲಿ ಕಾಮೆಂಟ್‌ ಹಾಕಲು ಆಗಲಿಲ್ಲ. ಪದಪರೀಕ್ಷೆ ಕೆಲಸ ಮಾಡುತ್ತಿಲ್ಲವಾದ್ದರಿಂದ ಪ್ರತಿಕ್ರಿಯೆ ದಾಖಲಾಗುತ್ತಿಲ್ಲ. ಕಾಮೆಂಟ್‌ ಹಾಕಲು ಸೈನಿನ್‌ ಆದರೆ ಸಾಕು, ಪದ ಪರೀಕ್ಷೆಯೂ ಬೇಕಾ?

ಮಾವೆಂಸ ಹೇಳಿದರು...

ಸವಡಿಯವರಿಗೆ,
ಯಾಕೆ ಆ ರೀತಿ ಪದಪರೀಕ್ಷಕ ನಿಮಗೆ ರಗಳೆ ಕೊಡುತ್ತದೆಯೋ ಗೊತ್ತಿಲ್ಲ. ನಿಮ್ಮ ಪ್ರತಿಕ್ರಿಯೆಗಳು ಮುಖ್ಯ. ಹಾಗಾಗಿ ಈ ಪದ ಪರೀಕ್ಷಕಕ್ಕೆ ‘ತಲಾಖ್’ ನೀಡಲಾಗಿದೆ!

 
200812023996