ಸೋಮವಾರ, ಡಿಸೆಂಬರ್ 15, 2008

ಐದು ನೂರರ ಸಂಭ್ರಮ!!


ಬ್ಲಾಗ್ ಸ್ನೇಹಿತರೇ,

ಈಗೀಗ ಒಂದು ವಾರ ಪೂರೈಸಿದ ಚಲನಚಿತ್ರವೂ ಯಶಸ್ವಿ ಏಳು ದಿನಗಳ ಹಣೆಪಟ್ಟಿ ಹಾಕಿಕೊಂಡು ಮಿಂಚಬೇಕಾದ ಸ್ಥಿತಿ. ಅದನ್ನು ನಾವು ಈ ಕನ್ನಡ ಬ್ಲಾಗ್‌ಗಳಿಗೂ ಅನ್ವಯಿಸಬಹುದೇನೋ. ಮುಖ್ಯವಾಗಿ ನನಗೆ, ನನ್ನ ಈ ಬ್ಲಾಗ್‌ಗೆ ೫೦೦ ವೀಕ್ಷಕರು ಬಂದು ಹೋದ ಖುಷಿಯನ್ನು ಆಚರಿಸಿಕೊಳ್ಳಬೇಕಿತ್ತು. ಇವತ್ತು ಆ ದಿನ!

ಬ್ಲಾಗ್‌ಗೆ ಶ್ರೀಕಾರ ಹಾಕಿ ಕೆಲ ದಿನ ಆಗಿತ್ತಾದರೂ ನಿಜಕ್ಕೂ ಅಪ್‌ಲೋಡ್ ಮಾಡಲು ಶುರು ಮಾಡಿದ್ದು ನವೆಂಬರ್ ಎರಡರಂದು. ಅಂದರೆ ಈ ೪೩ ದಿನಗಳಲ್ಲಿ ೫೩೮* ವೀಕ್ಷಕರು ಬಂದಿದ್ದಾರೆ ಎನ್ನಬಹುದು. ಸರಾಸರಿ ದಿನಕ್ಕೆ ೧೩ ನೋಡುಗರ ಆಗಮನವೇ ದೊಡ್ಡ ಸುದ್ದಿ, ವಾರ ಓಡಿದ ಕನ್ನಡ ಸಿನೆಮಾದಂತೆ!

ಅದಿರಲಿ ಬಿಡಿ, ಈ ಬ್ಲಾಗ್‌ನಿಂದ ಆದ ಲಾಭ ಅಪಾರ. ಪ್ರಜಾವಾಣಿಯ ಗಾಣಧಾಳು, ಸುವರ್ಣದಲ್ಲಿ ಮಿನುಗುತ್ತಿರುವ ಚಾಮರಾಜ ಸವಡಿ, ಬೇಳೂರು ಸುದರ್ಶನ.... ಹೀಗೆ ಹಲವರ ಪರಿಚಯಕ್ಕೆ ಇದು ಕಾರಣೀಭೂತವಾಗಿದೆ. ಅಷ್ಟೇಕೆ, ಮಾಲ್ವೆ ವಿನಾಯಕರಂತ ಸ್ನೇಹಿತರು ಫೋನ್ ಮಾಡುವ ಸಂಬಂಧ ಬೆಳೆದದ್ದು ಈ ಬ್ಲಾಗ್‌ನಿಂದ. ಬಹುಷಃ ಈ ಬ್ಲಾಗ್‌ನಿಂದ ವಿಶೇಷ ಚರ್ಚೆಗಳು ನಡೆಯದಿದ್ದರೂ ಪರಿಚಯ ವಿಸ್ತಾರವಾಗಿದೆ. 
ಬ್ಲಾಗ್ ಹೇಗಿರಬೇಕು ಎಂಬ ಬಗ್ಗೆ ಈಗಲೂ ಸ್ಪಷ್ಟ ರೂಪರೇಷೆ ಮೂಡಿಲ್ಲ. ಸ್ವಲ್ಪ ತಿಳಿ ಹಾಸ್ಯ, ಖುಷಿ ಮಾಹಿತಿಗಳ ಜೊತೆಗೆ ಗಂಭೀರ ವಿಚಾರ ನೀಡಲೂ ಆಸಕ್ತಿ ವಹಿಸಲಿದ್ದೇನೆ. ಅದರ ಪುಟ್ಟ ಝಲಕ್ ಈವರೆಗಿನದು. ನಿಮ್ಮ ಟೀಕೆ ಟಿಪ್ಪಣಿ ಇದ್ದರೆ ಅನುಕೂಲ.

ಬ್ಲಾಗ್ ಬಗ್ಗೆ ನನಗೆ ಹೆಚ್ಚೇನು ಗೊತ್ತಿಲ್ಲದಿದ್ದಾಗ ಖುದ್ದು ತಾನೇ ಕೂತು ‘ಮಾವೆಂಸ’ ಬ್ಲಾಗ್ ರೂಪಿಸಿಕೊಟ್ಟ  ಬೇದೂರು ಆದಿತ್ಯನಿಗೆ ನೂರೊಂದು ನಮಸ್ಕಾರ. ತಾಳ್ಮೆಯಿಂದ ಬ್ಲಾಗ್‌ಗೆ  ಬಂದುಹೋದವರ ಲೆಕ್ಕ ಹಾಕುವ, ಈಗ ಇಣುಕಿದವರ ಸಂಖ್ಯೆ ಹೇಳುವ ಸಾಫ್ಟ್‌ವೇರ್ ಹಾಕಿ ಒಪ್ಪಮಾಡಿದ ಆದಿತ್ಯನ ತಾಳ್ಮೆ ಅಜರಾಮರವಾಗಲಿ. ಸಲಹೆ ಸೂಚನೆ ಇತ್ತ ಗಾಣಧಾಳು, ಶ್ರೀಪಾದ್ ಡಾಕ್ಟ್ರು ಮುಂತಾದ ಅನೇಕರಿಗೆ ಸಲಾಂ.

ಇಷ್ಟೆಲ್ಲ ಹೇಳಿ ಸುಮ್ಮನೆ ಒಮ್ಮೆ ಮಿತ್ರ ಶ್ರೀಶಂನ ಬ್ಲಾಗ್‌ನಲ್ಲಿ ಬಂದುಹೋದವರ ಲೆಕ್ಕ ನೋಡಿದರೆ ತಲೆ ಗಿರಕ್ ಅಂತು, ೫೮೮೫!!! ನಾನು ಇಲ್ಲಿ ೫೦೦ ದಾಟಿದ್ದಕ್ಕೆ ಹಾರಾಡುತ್ತಿರುವೆ, ಛೆ!
-ಮಾವೆಂಸ, mavemsa@gmail.com

7 comments:

Harisha - ಹರೀಶ ಹೇಳಿದರು...

ಅಭಿನಂದನೆಗಳು.. ಒಂದೊಂದೇ ಮೆಟ್ಟಿಲು ಮೇಲೇರಿ...

NilGiri ಹೇಳಿದರು...

ಅಭಿನಂದನೆಗಳು :)

Unknown ಹೇಳಿದರು...

೫೦೦ ತಲುಪಿದ ಸಮಯದಲ್ಲಿ ಶುಭಾಶಯಗಳು.

Sushrutha Dodderi ಹೇಳಿದರು...

ಶುಭಾಶಯ.. ಬ್ಲಾಗಿಂಗ್ ಮತ್ತೂ ಜೋರಾಗಲಿ. :-)

ಮನಸ್ವಿ ಹೇಳಿದರು...
ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.
ಮನಸ್ವಿ ಹೇಳಿದರು...

೫೦೦ರ ಸಂಭ್ರಮಕ್ಕೆ ನನ್ನದೂ ಒಂದು ಶುಭಾಷಯ, ಏನಪಾ ಬಾಳ ನನ್ನ ಬಗ್ಗೆ ಬರದ್ದೆ, ಏನು ಸಮಾಚಾರ? ನೂರೊಂದು ನಮಸ್ಕಾರ ಹಾಕಿ ಸಕಪ್ಪಾ ಇವನ ಸಹವಾಸ ಅಂತ ಹೇಳುವವರನ್ನು ನೋಡಿದ್ದೆ ಇದೇನಿದು ಹೊಸಾ ವರಸೆ ಮಾವೆಂಸಾ?!! ಏನಾರು ಅಗ್ಲಿ ನಿಂಗೂ ಬೇರೆಯವರನ್ನ ರೈಲ್ ಹತ್ಸಕ್ಕೆ ಬತ್ತು ಅಂತ ಇವತ್ತು ಗೊತ್ತಾತು... ಹೀಗೆ ಮುಂದುವರೆಯಲಿ ನಿಮ್ಮ ಬ್ಲಾಗಿಂಗ್... ನಾನು ಹಾರೈಸುವ ಹೊತ್ತಿಗೆ ನಿಮ್ಮ ಬ್ಲಾಗ್ ಗೆ ಭೇಟಿ ನೀಡಿದವರ ಸಂಖೆ ೬೭೫ ದಾಟಿ ಹೋಗಿದೆ.. ಹೀಗೆ ಹಿಟ್ಟುಗಳು ಆಗುತ್ತಾ ಇರಲಿ ಎನ್ನುವುದು ನನ್ನ ಹಾರೈಕೆ.

ಮಾವೆಂಸ ಹೇಳಿದರು...

@ಆದಿತ್ಯ & ಶುಭಾಷಯ ಹೇಳಿದ ಎಲ್ಲರಿಗೂ......
ನೂರೊಂದು ನಮಸ್ಕಾರ ಹೃದಯಾಂತರಾಳದಿಂದ ಬಂದದ್ದು. ಅದರ ಬಗ್ಗೆ ಅನುಮಾನ ಬೇಡ! ಬ್ಲಾಗ್ ಈ ಪರಿ ನೋಡುಗರು ಹೆಚ್ಚಲು ಕಾರಣ ದಟ್ಸ್ ಇಂಡಿಯಾ ವೆಬ್‌ಸೈಟ್. ನನ್ನ ಚಾಕಲೇಟ್ ಲೇಖನದ ಮಾಹಿತಿ ಹಾಕಿ ಈ ಬ್ಲಾಗ್‌ಗೆ ಲಿಂಕ್ ಕೊಟ್ಟಿದ್ದ. ಇನ್ನಷ್ಟು ಲೇಖನ ಬರೆದು ಅದು ಉಳಿದೆಡೆ ಬರುವಂತ ಗುಣಮಟ್ಟ ಕಾಪಾಡುವುದು ನನ್ನಾಸೆ. ನಿನ್ನ ಬೆಂಬಲ ಇದ್ದೇ ಇರುತ್ತಲ್ಲಾ?
ಶುಭಾಷಯ ಹೇಳಿದ ಎಲ್ಲರಿಗೂ ವಂದನೆಗಳು. ಈ ಮನೆಯಂಗಳಕ್ಕೆ ಸದಾ ಬರುತ್ತಿರಿ.

-ಮಾವೆಂಸ

 
200812023996