ಮಂಗಳವಾರ, ಮಾರ್ಚ್ 17, 2009

ಊರುಗೋಲು ಅಂಕಣ ಬರಹ ಪುಸ್ತಕ ರೂಪದಲ್ಲಿ ಬಳಕೆ ತಿಳುವಳಿಕೆಯ ಸಹ ಸಂಪಾದಕ ಹಾಗೂ ಹಾಗೂ ಸಾಗರ ಬಳಕೆದಾರರ ವೇದಿಕೆಯು ಜಂಟಿಕಾರ್ಯದರ್ಶಿಯಾದ ನಾನು ಈ ಹಿಂದೆ ‘ ವಿಜಯ ಕರ್ನಾಟಕ’ ದೈನಿಕದಲ್ಲಿ 32ವಾರಗಳ ಕಾಲ ಊರುಗೋಲು ಎಂಬ ಅಂಕಣ ಬರೆದಿದ್ದ್ರು   ಇದೀಗ ಆ ಅಂಕಣ ಬರಹಗಳ ಸಂಗ್ರಹ ಪುಸ್ತಕ ರೂಪದಲ್ಲಿ ಪ್ರಕಟಗೊಂಡಿದೆ. ಪುಸ್ತಕದ ಶೀರ್ಷಿಕೆಯೂ ಅದೇ, ಊರುಗೋಲು!
90 ಪುಟಗಳ ಈ ಪುಸ್ತಕದಲ್ಲಿ ಒಟ್ಟು 68 ವಿಚಾರಗಳ ಮಾರ್ಗದರ್ಶಿ ಮಾಹಿತಿಗಳಿವೆ. ಪ್ರಜ್ಞಾವಂತರು ಅಸಡ್ಡೆಯಿಂದ, ಬಡವರ್ಗದವರೂ ಅಜ್ಞಾನದಿಂದ ಸಾಕಷ್ಟು ನಷ್ಟಗೊಳಗಾಗುತ್ತಲೇ, ಬಂದಿರುವ ಹಿನೆಲೆಯಲ್ಲಿ, ನಿತ್ಯಬದುಕಿಗೆ ಬೆಂಬಲವಾಗುವ ಮಾಹಿತಿಗಳನ್ನು ಸಂಗ್ರಹಿಸಿಕೊಡುವ ಪ್ರಯತ್ನವಿದು.  ಬದುಕಿನ ದಾರಿಯಲ್ಲಿ ಕಾನೂನುಗಳ ಅರಿವು, ಮಾಹಿತಿಗಳ ಅಗತ್ಯಗಳನ್ನು ತಕ್ಕಮಟ್ಟಿಗಾದರೂ ಈ ಪುಸ್ತಕ ಪೂರೈಸಬಲ್ಲುದು. ಯಾಕೆ ಈ ಪುಸ್ತಕಕ್ಕೆ ‘ ಊರುಗೋಲು’ ಎಂಬ ಹೆಸರು? 
ಪುಸ್ತಕದ ಪ್ರಸ್ತಾವನೆ ಹೇಳುತ್ತದೆ, ಕಾನೂನು ಜ್ಞಾನವಿಲ್ಲದೆ ನಾವು ಅಕಾಲಿಕ ವೃದ್ದರಾಗಿಬಿಟ್ಟಿದ್ದೇವೆ. ನಮ್ಮ ಜೀವನಕ್ಕೀಗ ನಡೆಯಲು ಏನಾದರೊಂದು ಆಸರೆ ಇದ್ದರೆ ಕ್ಷೇಮ. ಅಷ್ಟರಮಟ್ಟಿಗೆ ಎಡವಿ ಬೀಳುವುದು ತಪ್ಪೀತು. ಆ ಅರ್ಥದಲ್ಲಿಯೇ ಈ ಹಿಂದೆ ಅಂಕಣಕ್ಕೆ ಮತ್ತು ಈಗ ಪುಸ್ತಕಕ್ಕೆ ‘ ಊರುಗೋಲು’ ಎಂದೇ ಹೆಸರಿಡಲಾಗಿದೆ.
48ರೂ.ಗಳ ಈ ಪುಸ್ತಕದ ಪ್ರಕಾಶಕರು ಹರೀಶ್ ಎಂಟರಪ್ರೈಸಸ್, ಆಸಕ್ತರು ಇನ್ಫೋ ಮೋಹನ್‌ರವರನ್ನು ಸಂಪರ್ಕಿಸಬಹುದು.ಇವರ ಮೊಬೈಲ್ ಸಂಖ್ಯೆ: 9844104958

8 comments:

Unknown ಹೇಳಿದರು...

shubhavagali
sir

PARAANJAPE K.N. ಹೇಳಿದರು...

ನಿಮ್ಮ ಪ್ರಯತ್ನಕ್ಕೆ ಶುಭ ಹಾರೈಕೆಗಳು , ನಮಸ್ಕಾರ

ಮಾವೆಂಸ ಹೇಳಿದರು...

@ಶ್ರೀಶುಂ
ತಮ್ಮ ಹಾರೈಕೆಗೆ ಮನದಾಳದ ನಮಸ್ತೆ......

ಮಾವೆಂಸ ಹೇಳಿದರು...

@ಪರಾಂಜಪೆ ಕೆ.ಎನ್.
ವಂದನೆಗಳನ್ನು ಹೇಳುತ್ತಿದ್ದೇನೆ. ಒಪ್ಪಿಸಿಕೊಳ್ಳಿ.

NiTiN Muttige ಹೇಳಿದರು...

oHH gr8!! congrats..

ಅನಾಮಧೇಯ ಹೇಳಿದರು...

NIMMA PRAYATHNA NAMAGE DAARI DEEPAVAAGLI NMMA UURUGOLININDA OORUGOLILLADE NDEYUVANTAGALI.

ಮಾವೆಂಸ ಹೇಳಿದರು...

@ನಿತಿನ್,
ತಮ್ಮ ಮಾತು ನೂರು ಪುಸ್ತಕ ಬರೆಯುವ ಆಸೆ ತಂದಿದೆ....

ಮಾವೆಂಸ ಹೇಳಿದರು...

@ಅನಾಮಧೇಯ,
ಅಷ್ಟು ದೊಡ್ಡ ಮಾತಿಗೆ ನಾನು ಅರ್ಹನೇ? ಪ್ರಶ್ನೆ ಕಾಡುತ್ತಿದೆ. ಏನೇ ಇರಲಿ, ನಿಮ್ಮ ಪ್ರೋತ್ಸಾಹದ ನುಡಿ ಖುಷಿ ತಂದಿದೆ.

 
200812023996