ಶುಕ್ರವಾರ, ಜನವರಿ 2, 2009

ಮೊಬೈಲ್ ಇದ್ದಲ್ಲಿ ಮಾತ್ರ ಓದಿ!


 ಮೊಬೈಲ್ ಟಾಕ್ - 2
ರಜಾದಿನ, ಇಲ್ಲ  ಉಚಿತ ಎಸ್‌ಎಂಎಸ್!
 ಸಂಗಮೇಶ್ ಮೆಣಸಿನಕಾಯಿ ಬರೆಯುತ್ತಾರೆ.  
ಕಳೆದ ಅಕ್ಟೋಬರ್ ೧೨ರಂದು ನನಗೆ ಏರ್‌ಟೆಲ್‌ನಿಂದ ಒಂದು ಸಂದೇಶ ಬಂತು. ’ಎಸ್‌ಎಂಎಸ್‌ನ ಸರಾಗ ಅನುಭವಕ್ಕಾಗಿ ಅಕ್ಟೋಬರ್ ೧೩ರಂದು ಉಚಿತ/ರಿಯಾಯತಿ ದರದ ಎಸ್‌ಎಂಎಸ್ ಸೌಲಭ್ಯ ಇರುವುದಿಲ್ಲ. ಮುಂದಿನ ಇಂಥ ಮೂರು ದಿನಗಳನ್ನು ತಿಳಿಯಲು ೩ ಆಂಙS ಎಂದು ೨೨೨ಗೆ ಎಸ್‌ಎಂಎಸ್ ಮಾಡಿ’ ಎಂಬುದು ಅದರ ಸಾರ. ಅದರಂತೆ ನಾನು ಎಸ್‌ಎಂಎಸ್ ಮಾಡಿದಾಗ ಉಚಿತ/ರಿಯಾಯತಿ ದರದ ಎಸ್‌ಎಂಎಸ್ ಸೌಲಭ್ಯ ಇಲ್ಲದ ದಿನಗಳು ಅಕ್ಟೋಬರ್-೧೪, ಅಕ್ಟೋಬರ್-೧೯ ಹಾಗೂ ನವೆಂಬರ್-೦೮ ಎಂಬ ಸಂದೇಶ ಬಂತು.
  ಸರಿ, ಅಕ್ಟೋಬರ್ ೧೯ರಂದು ಯಾರಿಗೂ ಸಂದೇಶ ಕಳುಹಿಸಲಿಲ್ಲ. ಅದೇ ದಿನ ಸಂಜೆ ’ಎಸ್‌ಎಂಎಸ್‌ನ ಸರಾಗ ಅನುಭವಕ್ಕಾಗಿ ಅಕ್ಟೋಬರ್ ೨೦ರಂದು ಉಚಿತ/ರಿಯಾಯತಿ ದರದ ಎಸ್‌ಎಂಎಸ್ ಸೌಲಭ್ಯ ಇರುವುದಿಲ್ಲ. ಮುಂದಿನ ಮೂರು ದಿನಗಳನ್ನು ತಿಳಿಯಲು ೩ಆಂಙS ಎಂದು ೨೨೨ಗೆ ಎಸ್‌ಎಂಎಸ್ ಮಾಡಿ’ ಎಂಬ ಸಂದೇಶ ಬಂತು! ಒಂದು ವಾರದ ಹಿಂದಷ್ಟೇ ಏರ್‌ಟೆಲ್ ಕಂಪನಿಯೇ ಕಳುಹಿಸಿದ ಸಂದೇಶದಲ್ಲಿ ’ಅಕ್ಟೋಬರ್-೨೦..’ ಇರಲಿಲ್ಲ. ಈ ಕುರಿತು ಕಂಪನಿಯ ಕಸ್ಟಮರ್ ಕೇರ್ ಎಕ್ಸಿಕ್ಯೂಟಿವ್‌ಗೆ ದೂರು ಸಲ್ಲಿಸಲು ಕರೆ ಮಾಡಿದರೆ ಇಂಥ ದೂರುಗಳನ್ನು ಸ್ವೀಕರಿಸಲು ಸಾಧ್ಯವಿಲ್ಲ ಎಂಬ ಉತ್ತರ ಬಂತು.
  ಇತ್ತೀಚೆಗಷ್ಟೇ ಉಚಿತ ಸಂದೇಶ ಸೇವೆಯನ್ನು ಹಿಂತೆಗೆದುಕೊಂಡಿರುವ ಮೊಬೈಲ್ ಕಂಪನಿಗಳು ಈಗ ಏನೇನೊ ನೆಪ ಹುಡುಕಿ ಗ್ರಾಹಕರ ಹಣ ದೋಚುವಲ್ಲಿ ಸ್ಪರ್ಧೆ ನಡೆಸಿವೆ. ಇವರಿಗೆ ಹೇಳೋರು-ಕೇಳೋರು ಯಾರೂ ಇಲ್ಲವೇ? ಟ್ರಾಯ್ ಈ ಬಗ್ಗೆ ಗಮನ ಹರಿಸುವುದೇ? ಅಕ್ಟೋಬರ್೨೦ ರಂದು ಸಂಗಮೇಶ್ ಎಸ್‌ಎಂಎಸ್‌ಗಳನ್ನು ಮಾಡಿ ಅದಕ್ಕೆ ಶುಲ್ಕ ಪಾವತಿಸುವಂತಾಗಿತ್ತೇ? ಹಾಗಿದ್ದಲ್ಲಿ ಆ ಮೊತ್ತವನ್ನು ಮರಳಿ ಪಡೆಯಲು ಸಾಧ್ಯವಿದೆ.
ವಾಸ್ತವವಾಗಿ, ಟ್ರಾಯ್‌ನ ಒಂದು ನಿರ್ದೇಶನದಂತೆ  ಆಕ್ಟಿವೇಷನ್ ನಂತರದ ಆರು ತಿಂಗಳವರೆಗೆ ಅಥವಾ ವ್ಯಾಲಿಡಿಟಿ ಅವಧಿಯವರೆಗೆ ಪ್ಲಾನ್‌ನ ಯಾವುದೇ ಅಂಶವನ್ನು ಬದಲಿಸುವಂತಿಲ್ಲ, ಅದಕ್ಕೆ ಕತ್ತರಿ ಹಾಕುವಂತಿಲ್ಲ. ಈ ನಿರ್ದೇಶನದ ಪ್ರಕಾರ, ರಜಾದಿನಗಳಲ್ಲಿ ಉಚಿತ ಎಸ್‌ಎಂಎಸ್‌ನ್ನು ರದ್ದುಗೊಳಿಸುವಂತಿಲ್ಲ ಅಲ್ಲವೇ? ಬಂದಿದೆ ಹೊಸ ನಿಯಮ! 
ನಿರ್ದಿಷ್ಟ ರಜಾದಿನಗಳಲ್ಲಿ ವಿಪರೀತ ಎಸ್‌ಎಂಎಸ್‌ಗಳ ಹಾರಾಟ ನಡೆಯುತ್ತದೆ. ಇದೇ ಕಾರಣದಿಂದ  ವ್ಯವಸ್ಥೆಗೆ ಧಕ್ಕೆಯಾಗುತ್ತದೆ. ಸೇವಾ ಗುಣಮಟ್ಟ ಕುಸಿಯುತ್ತದೆ. ಸೇವೆ ‘ಜ್ಯಾಮ್’ ಆದೀತು. ಇದನ್ನು ತಪ್ಪಿಸಲು ವರ್ಷದ ಕೆಲವು ದಿನ ಉಚಿತ, ರಿಯಾಯ್ತಿ ಸಂದೇಶ ಸೇವೆಯನ್ನು ಸ್ಥಗಿತಗೊಳಿಸುವುದಕ್ಕೆ ಅವಕಾಶ ನೀಡುವಂತೆ ಮೊಬೈಲ್ ಕಂಪನಿಗಳು ಟ್ರಾಯ್‌ನ್ನು ವಿನಂತಿಸಿದ್ದವು. ತನ್ನ ಹಿಂದಿನ ನಿರ್ದೇಶನದ ಉಲ್ಲಂಘನೆಯಾಗಿದ್ದರೂ ಟ್ರಾಯ್ ಇದಕ್ಕೆ ಒಪ್ಪಿ ಕೆಲವು ನಿಬಂಧನೆಗಳನ್ನು ಹೇರಿತ್ತು. ಅವುಗಳೆಂದರೆ,
* ನಿರ್ದಿಷ್ಟ ದಿನಗಳನ್ನು ಆಯಾ ಕಂಪನಿಗಳು ನಿರ್ಧರಿಸಿ, ಎಸ್‌ಎಂಎಸ್ ಬ್ಲಾಕ್‌ಔಟ್ ದಿನಗಳೆಂದು ಘೋಷಿಸಬಹುದು. ಈ ದಿನಗಳಲ್ಲಿ ಉಚಿತ ಯಾ ರಿಯಾಯ್ತಿ ಸಂದೇಶ ಸೇವೆ ಇರುವುದಿಲ್ಲ. ಆ ದಿನದ ಎಸ್‌ಎಂಎಸ್‌ನ ದರ ನಿಗದಿ ಪಡಿಸುವುದು ಆಯಾ ಕಂಪನಿಗೆ ಸೇರಿದ್ದು. ಆದರೆ ಮೊಬೈಲ್ ಚಂದಾದಾರನಿಗೆ ಪ್ಯಾಕೇಜ್ ಆಕ್ಟೀವೇಷನ್ ವೇಳೆಯಲ್ಲಿಯೇ ಬ್ಲಾಕ್ ಔಟ್ ದಿನ ಯಾವುವೆಂಬ ಮಾಹಿತಿ ಒದಗಿಸಬೇಕು. ಅಲ್ಲದೇ ವರ್ಷಕ್ಕೆ ಗರಿಷ್ಠ ಐದು ದಿನ ಮಾತ್ರ ಬ್ಲಾಕ್ ಔಟ್ ದಿನವೆಂದು ಘೋಷಿಸಬಹುದು.
ಟಿಪ್ಪಣಿ- ವಾಸ್ತವವಾಗಿ, ಮಾಹಿತಿ ಕೊಡುವ ಕ್ರಮ ಜಾರಿಯಲ್ಲಿಲ್ಲ. ಕೇಳಿದರಷ್ಟೇ ವಿವರ ಸಿಗುತ್ತಿದೆ.
* ಬ್ಲಾಕ್‌ಔಟ್ ದಿನದ ಎಸ್‌ಎಂಎಸ್ ದರವನ್ನು ಗ್ರಾಹಕರಿಗೆ ತಿಳಿಸಲೇಬೇಕು. ಒಮ್ಮೆ ಪ್ಯಾಕೇಜ್ ವೇಳೆ ಬ್ಲಾಕ್‌ಔಟ್ ದಿನಗಳನ್ನು ಪ್ರಕಟಿಸಿದ ಮೇಲೆ ಬದಲಿಸುವಂತಿಲ್ಲ, ಹೊಸ ಸೇರ್ಪಡೆ ಮಾಡುವಂತಿಲ್ಲ.
ಟಿಪ್ಪಣಿ - ಮೊಬೈಲ್ ಕಂಪನಿಗಳು ರಂಗೋಲಿ ಕೆಳಗೆ ನುಸುಳುವುದನ್ನು ನಿಲ್ಲಿಸಿಲ್ಲ. ಬಹುಷಃ ಬ್ಲಾಕ್ ಔಟ್ ದಿನಕ್ಕೆ ಟ್ರಾಯ್‌ನ್ನು ಒಪ್ಪಿಸಿದ ನಂತರ ಅವು ಈ ಮಾದರಿಯಲ್ಲಿ ಮತ್ತೆ ಲಾಭ ಹುಡುಕಲಾರಂಭಿಸಿವೆ. ಸಂಗಮೇಶ್ ಮೆಣಸಿನಕಾಯಿಯವರ ಪ್ರಕರಣ ನಿಯಮಬಾಹಿರ ಚಟುವಟಿಕೆಗೆ ಸ್ಪಷ್ಟ ಉದಾಹರಣೆ.
ವಿಪರೀತ ನಿಯಮಗಳನ್ನು ಮಾಡಿ ಟ್ರಾಯ್ ಗ್ರಾಹಕ ಪರ ಎನ್ನಿಸಿಕೊಳ್ಳಲು ಹಾತೊರೆಯುತ್ತದೆ. ನಿಯಮ ಜಾರಿಯಲ್ಲಿ ಎಂತಹ ಆಸಕ್ತಿಯನ್ನೂ ತೋರುವುದಿಲ್ಲ. ಟ್ರಾಯ್ ಆಕ್ಟ್‌ನ ಸೆಕ್ಷನ್ ೧೩ ಅದಕ್ಕೆ ಬ್ರಹ್ಮಾಂಡ ಶಕ್ತಿ ಕೊಟ್ಟಿದ್ದರೂ ನಿರರ್ಥಕವಾಗುತ್ತಿದೆ ಎಂಬ ಮಾತುಗಳು ಗ್ರಾಹಕ ವಲಯದಲ್ಲಿದೆ. ಒಮ್ಮೆ ಮೊಬೈಲ್ ಕ್ಷೇತ್ರದಲ್ಲಿ ಕಣ್ಣಾಡಿಸಿದರೆ ಅದು ನಿಜ ಎನ್ನಿಸುತ್ತದೆ.
ಟ್ರಾಯ್‌ನ್ನು ಮೊಬೈಲ್ ಕಂಪನಿಗಳು ಬ್ಲಾಕ್‌ಔಟ್ ದಿನದ ವಿಷಯದಲ್ಲಿ ಪಿಗ್ಗಿ ಬೀಳಿಸಿದವು ಎನ್ನಬಹುದು. ಕಂಪನಿಯೊಂದು ಎಷ್ಟು ಸಂಖ್ಯೆಯ ಚಂದಾದಾರರನ್ನು ಹೊಂದುತ್ತದೆಯೋ ಅವರೆಲ್ಲರಿಗೂ ಸೇವೆ ಒದಗಿಸುವ ಸಾಮರ್ಥ್ಯವನ್ನು ಅಳವಡಿಸಿಕೊಳ್ಳಲೇಬೇಕು. ‘ಟ್ರಾಫಿಕ್ ಜ್ಯಾಮ್’ ಮಾತ್ರ ಆಗಬಾರದು. ಬ್ಲಾಕ್ ಔಟ್ ಪ್ರಶ್ನೆ ಉದ್ಭವಿಸಬಾರದು. ಇವತ್ತು ಸುಳ್ಳೇ ಬ್ಲಾಕ್‌ಔಟ್ ಘೋಷಿಸಿ ಅಮಾಯಕ ಚಂದಾದಾರರ ಕೈ ತಪ್ಪಿ ಮಾಡಿದ ಎಸ್‌ಎಂಎಸ್‌ನಿಂದ ಮೊಬೈಲ್ ಕಂಪನಿಗಳು ಹಣವನ್ನು ಗೋರಿಕೊಳ್ಳುತ್ತಲೇ ಇವೆ. ಟ್ರಾಯ್ ತಣ್ಣಗಿದೆ!
- ಮಾವೆಂಸ. mavemsa@gmail.com

6 comments:

ಅನಾಮಧೇಯ ಹೇಳಿದರು...

tumba oLLeya kelasa maaDuttiddIri. munduvarisi.

Ashok Uchangi ಹೇಳಿದರು...

ಮೊಬೈಲ್ ಕಂಪನಿಗಳ ಹಣಮಾಡುವ ಧಂದೆಯ ಇನ್ನೊಂದು ಮುಖವಿದು.ಸವಿವರವಾಗಿ ಬರೆದು ಮೊಬೈಲಿಗಳನ್ನು ಎಚ್ಚರಿಸಿದ್ದೀರಿ
ಧನ್ಯವಾದಗಳು
ಅಶೋಕ ಉಚ್ಚಂಗಿ
http://mysoremallige01.blogspot.com/

ಮನಸ್ವಿ ಹೇಳಿದರು...

ನಾನು ಇದರ ಬಗ್ಗೆ ಅಲ್ಪ ಸ್ವಲ್ಪ ಬರೆದಿದ್ದೆ ನನ್ನ ಬ್ಲಾಗಿನಲ್ಲಿ.. ಒಂದೊಳ್ಳೆ ಮಾಹಿತಿಗೆ ಧನ್ಯವಾದಗಳು.. ಅಂದಹಾಗೆ 3days ಎನ್ನುವುದು translate ಆಗಿ ೩ಆಂಙS ಎಂದಾಗಿದೆ.. vodafone ಗ್ರಾಹಕರು MYTARIFF ಎಂದು 997 ಗೆ ಕಳುಹಿಸಿದರೆ ನೀವು ಯಾವ ಪ್ಲಾನ್ ನ ಚಂದಾದಾರರು ಎನ್ನುವುದು ತಿಳಿಯುತ್ತದೆ,
ಮತ್ತೊಂದು ವಿಶೇಷ ಗೊತ್ತಾ? ಬಿಎಸ್ಎನ್ಎಲ್ ಗ್ರಾಹಕರು help ಎಂದು ಟೈಪಿಸಿ 53733 ಗೆ ಎಸ್ಎಂಎಸ್ ಮಾಡಿದರೆ ಗ್ರಾಹಕ ಕೇಂಧ್ರದವರೇ ಕೆಲವು ಸೆಕೆಂಡು/ನಿಮಿಷ/ಘಂಟೆಗಳ ನಂತರ ಕರೆ ಮಾಡಿ ನಿಮಗೆ ಏನು ಸಹಾಯ ಬೇಕೆಂದು ಕೇಳುತ್ತಾರೆ, ಇದರಿಂದ ಸೇವಾ ಕೇಂದ್ರಕ್ಕೆ ಕರೆ ಮಾಡಿ ಕಾಯುವ ರಗಳೆ ತಪ್ಪುತ್ತದೆ ಆದರೆ ಈಗ ಕರೆ ಬರಬಹುದು ಆಗ ಕರೆ ಬರಬಹುದು ಎನ್ನುವ ರಗಳೆ ಇರುತ್ತದೆ~!

ಮಾವೆಂಸ ಹೇಳಿದರು...

@ಮನಸ್ವಿ,
ನೀನು ಕೊಟ್ಟ ಪುಟ್ಟ ಮಾಹಿತಿಗಳನ್ನು ‘ಬಳಕೆ ತಿಳುವಳಿಕೆ’ಗೆ ಬಳಸಿಕೊಳ್ಳಬಹುದೇ?

ರಮೇಶ್ ಹಿರೇಜಂಬೂರು ಹೇಳಿದರು...

sangamesh super agi brdanri...ito article bareyodraga ava ettida kairi...

ಮನಸ್ವಿ ಹೇಳಿದರು...

ಖಂಡಿತಾ.. ದಾರಾಳವಾಗಿ ಬಳಸಿಕೊಳ್ಳಿ.. ನಾನು ನಿಮ್ಮ ಕಮೆಂಟನ್ನು ನೋಡಿರಲೇ ಇಲ್ಲಾ... ತುಂಬಾ ತಡವಾಗಿ ಪ್ರತಿಕ್ರಿಯಿಸಿದ್ದಕ್ಕೆ ಕ್ಷಮೆಯಿರಲಿ

 
200812023996