ಕ್ಲಿಕ್ ಮಾಡಿದರೆ ಸಾಕು...........
ಯಾವುದೊ ಅಂಗಡಿ ಅಥವಾ ಕಂಪನಿ ಮೇಲೆ ಗ್ರಾಹಕ ನ್ಯಾಯಾಲಯದಲ್ಲಿ ಕೇಸು ಹಾಕಿದ್ದೀರಿ. ಅದರ ವಿಚಾರ ತಿಳಿಯಬೇಕು-ಹಿಯರಿಂಗ್ ಯಾವಾಗ ಇದೆ ಅಥವಾ ತೀರ್ಪು ಬಂದಿದೆಯೆ ಇತ್ಯಾದಿ ಅತ್ಯಗತ್ಯ ಮಾಹಿತಿ ಗೊತ್ತಾಗಬೇಕು. ಈಗ ಇದಕ್ಕಾಗಿ ಇರುವ ಒಂದೇ ದಾರಿ ನ್ಯಾಯಾಲಯಕ್ಕೇ ಹೋಗಿ ವಿಚಾರಿಸಬೇಕು. ಜಿಲ್ಲಾ ಕೇಂದ್ರದಲ್ಲಿದ್ದರೆ ಸರಿ, ದೂರದ ಊರಿನವರಾದರೆ? ದುಡ್ಡು-ಸಮಯ ವೆಚ್ಚ ಮಾಡಿ ತಿರುಗಬೇಕಾಗುತ್ತದೆ.
ಆದರೆ ಇನ್ನು ಮುಂದೆ ಅಂತಹ ತಾಪತ್ರಯದ ಅಗತ್ಯವಿಲ್ಲ. ನಿಮ್ಮಲ್ಲಿ ಇಂಟರ್‌ನೆಟ್ ಸಂಪರ್ಕ ಇರುವ ಕಂಪ್ಯೂಟರ್ ಇದ್ದರೆ ಸರಿ. ಇಲ್ಲವೆಂದರೆ ಹತ್ತಿಪ್ಪತ್ತು ರೂಪಾಯಿ ಖರ್ಚು ಮಾಡಿ ಒಂದು ಇಂಟರ್‌ನೆಟ್ ಕೆಫೆಗೆ ಹೊಕ್ಕಿದರೆ ಹತ್ತು ನಿಮಿಷದಲ್ಲೇ ಮೇಲಿನ ಮಾಹಿತಿಯೆಲ್ಲ ಸಿಗುತ್ತದೆ. ಅಂತಹದೊಂದು ಗ್ರಾಹಕ-ಸ್ನೇಹಿ ವ್ಯವಸ್ಥೆಯನ್ನು ಕೇಂದ್ರ ಸರ್ಕಾರದ ಗ್ರಾಹಕ ವ್ಯವಹಾರಗಳ ಇಲಾಖೆ ರೂಪಿಸಿ ಜಾರಿಗೆ ತಂದಿದೆ.
CONFONET ಎಂದು ಕರೆಯುವ ಈ ವ್ಯವಸ್ಥೆಯಡಿ ರಾಜ್ಯದ ಎಲ್ಲಾ ೩೦ ಜಿಲ್ಲಾ ಗ್ರಾಹಕ ವ್ಯಾಜ್ಯ ಪರಿಹಾರ ವೇದಿಕೆಗಳನ್ನು ಮತ್ತು ರಾಜ್ಯ ಗ್ರಾಹಕ ವ್ಯಾಜ್ಯ ಪರಿಹಾರ ಆಯೋಗವನ್ನು ಕಂಪ್ಯೂಟರೀಕರಣಗೊಳಿಸಿ ಅಂತರ್ ಜಾಲಕ್ಕೆ ಸೇರಿಸಲಾಗುತ್ತಿದೆ. ಈ ಯೋಜನೆಗೆ ಭಾರತ ಸರ್ಕಾರದ ಬಿಎಸ್‌ಎಸ್‌ಎಲ್ ಮತ್ತು ನ್ಯಾಶನಲ್ ಇನ್ವರ್ಫಾಟಿಕ್ ಸೆಂಟರ್ ಸಂಸ್ಥೆಗಳು ಸಹಕಾರ ನೀಡುತ್ತಿವೆ.
ಇದರಿಂದ ಗ್ರಾಹಕ ನ್ಯಾಯಾಧಿಕರಣಗಳಲ್ಲಿ ಈ- ಆಡಳಿತ ಅನುಷ್ಠಾನಗೊಳ್ಳುತ್ತದೆ. ಅಲ್ಲದೆ ಅವುಗಳ ಕೆಲಸ-ಕಾರ‍್ಯದಲ್ಲಿ ದಕ್ಷತೆ ಹಾಗೂ ಪಾರದರ್ಶಕತೆ ಬರಬಹುದೆಂದು ನಿರೀಕ್ಷಿಸಲಾಗಿದೆ. ಇದರಂತೆ ಪ್ರತಿ ಜಿಲ್ಲಾ ಗ್ರಾಹಕ ನ್ಯಾಯಾಲಯಕ್ಕೆ ೩ ಕಂಪ್ಯೂಟರ್‌ಗಳನ್ನು ಕೊಟ್ಟು ಅವಕ್ಕೆ ಬ್ರಾಡ್‌ಬ್ಯಾಂಡ್ ಸವಲತ್ತು ಒದಗಿಸಲಾಗುವುದು. ಇದಕ್ಕಾಗೇ ವಿನ್ಯಾಸಗೊಳಿಸಿದ ಸಾಫ್ಟ್‌ವೇರ್ ಒಂದನ್ನು ಅಳವಡಿಸಿ ಜಿಲ್ಲಾ ಗ್ರಾಹಕ ನ್ಯಾಯಾಲಯಗಳ ಎಲ್ಲಾ ಚಟುವಟಿಕೆಗಳನ್ನು ಅಂದರೆ ಕೊಟ್ಟಿರುವ ತೀರ್ಪು, ಹಿಯರಿಂಗ್ ದಿನಾಂಕ, ಆದೇಶ, ನ್ಯಾಯಾಲಯದಲ್ಲಿ ಇಟ್ಟಿರುವ ಠೇವಣಿ ಮುಂತಾದ ವಿವರಗಳನ್ನು ನಿರಂತರ ಅಂತರ್‌ಜಾಲಕ್ಕೆ ಹಾಕಲಾಗುವುದು. ಇದೇ ರೀತಿ ರಾಜ್ಯ ಮತ್ತು ರಾಷ್ಟ್ರ ಆಯೋಗಗಳ ಮೇಲಿನ ತರದ ಮಾಹಿತಿಗಳು ಕೂಡಾ ಇಲ್ಲಿ ಕಾಣಸಿಗುತ್ತದೆ.
ಕೇಸುಗಳ ವಿವರ, ಮುಂದಿನ ಹಿಯರಿಂಗ್ ದಿವಸ, ತೀರ್ಪುಗಳು ಮುಂತಾದವು ಈ ವೆಬ್‌ಸೈಟಿನಲ್ಲಿ ದೊರಕುವುದರಿಂದ ಇದು ಸಂತ್ರಸ್ಥ ಗ್ರಾಹಕರಿಗೆ ತುಂಬಾ ಉಪಯುಕ್ತವಾಗಬಲ್ಲದು. ಪತ್ರಕರ್ತರಿಗೆ ಹಾಗೂ ಗ್ರಾಹಕ ಸಂಘಟನೆಗಳಿಗೂ ಇದರ ಪ್ರಯೋಜನ ಸಿಗುತ್ತದೆ.
ವೆಬ್‌ಸೈಟ್ ವಿಳಾಸ :-
4 comments:
ಗ್ರಾಹಕ ನ್ಯಾಯಾಲಯಗಳು ಇದೀಗ improve ಆಗ್ತಾ ಇವೆ. ಇಂತಹದೇ ವ್ಯವಸ್ಥೆಯನ್ನು ಇತರ ನ್ಯಾಯಾಲಯಗಳಿಗೂ ವಿಸ್ತರಿಸಿದರೆ ಎಷ್ಟು ಚೆನ್ನಾಗಿರುತ್ತೆ!
ನಿಮ್ಮ ಲೇಖನ ಅರ್ಥಪೂರ್ಣವಾಗಿದೆ, ನ್ಯಾಯ ಎಲ್ಲರಿಗೂ ಕೈಗೆಟಕುವಂತಿದ್ದರೆ ಚೆನ್ನ
ಮಾಹಿತಿಪೂರ್ಣ
ಪ್ರತಿಕ್ರಿಯಿಸಿದ ಎಲ್ಲರಿಗೂ ವಂದನೆಗಳು. ಈ ಪ್ರೋತ್ಸಾಹ ಸದಾ ಇರಲಿ.
200812023996 ಕಾಮೆಂಟ್ ಪೋಸ್ಟ್ ಮಾಡಿ